
ಹಿರಿಯೂರು :
ನ್ಯೂ ವೈಬ್ರೆಂಟ್ ಪಿಯು ಕಾಲೇಜು ಮೂಡುಬಿದಿರೆ ಇವರ ನೇತೃತ್ವದಲ್ಲಿ ಚಿತ್ರದುರ್ಗದ ಬಸವೇಶ್ವರ ವೃತ್ತದಲ್ಲಿರುವ ಸಂತಜೋಸೆಫರ ಕಾನ್ವೆಂಟ್ ವಿದ್ಯಾಸಂಸ್ಥೆಯಲ್ಲಿ ಇದೇ ಡಿಸೆಂಬರ್ 28 ರಂದು ಭಾನುವಾರ ಸ್ಕಾಲರ್ ಶಿಪ್ ಪರೀಕ್ಷೆ -2026 ಏರ್ಪಡಿಸಲಾಗಿದೆ ಆಸಕ್ತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಭಾಗವಹಿಸುವ ಮೂಲಕ ಅತ್ಯಂತ ಕಡಿಮೆ ಪೀಸ್ ನಲ್ಲಿ ಪ್ರತಿಷ್ಠಿತ ವೈಬ್ರೆಂಟ್ ಪಿಯು ಕಾಲೇಜು ಮೂಡುಬಿದಿರೆಯಲ್ಲಿ ನೀಟ್, ಜೆಇಇ, ಸಿಇಟಿ ಓದುವ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಸಂಸ್ಥೆಯ ಎಕ್ಸಿಕ್ಯೂಟಿವ್ ಸ್ಟೀವನ್ ರವರು ತಿಳಿಸಿದ್ದಾರೆ.

ಈ ಸ್ಕಾಲರ್ ಶಿಪ್ ಪರೀಕ್ಷೆಯು 60 ಪ್ರಶ್ನೆಗಳನ್ನು ಒಳಗೊಂಡಿದ್ದು , ಇದರಲ್ಲಿ ಗಣಿತಶಾಸ್ತ್ರ-30 ಪ್ರಶ್ನೆಗಳು, ವಿಜ್ಞಾನ-30 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆ ಅವಧಿ ಒಂದು ಗಂಟೆ ಇದ್ದು, ಈ ಪರೀಕ್ಷೆಯನ್ನು ನೀಲಿ ಅಥವಾ ಕಪ್ಪು ಬಾಲ್ ಪೆನ್ನಿನಿಂದ ಬರೆಯಬಹುದಾಗಿದೆ, ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಆಧಾರ ಕಾರ್ಡ್ ಅಥವಾ ಶಾಲಾ ಗುರುತಿನ ಚೀಟಿಯನ್ನು ತರಬೇಕಾಗಿದೆ ಋಣಾತ್ಮಕ ಅಂಕಗಳು ಇರುವುದಿಲ್ಲ ಪ್ರತಿಯೊಂದು ಪ್ರಶ್ನೆಯ ಉತ್ತರಕ್ಕೆ ನಾಲ್ಕು ಆಯ್ಕೆಗಳಿದ್ದು ಒಂದು ಅಂಕಗಳು ಇರುತ್ತವೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಇವರು ನಗರದ ವಾಣಿವಿಲಾಸ ವಿದ್ಯಾಸಂಸ್ಥೆಗೆ ಭೇಟಿ ನೀಡಿ, ಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರು ಹನುಮಂತರಾಯಪ್ಪ ಹಾಗೂ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ ಜಗನ್ನಾಥ್ ರವರಿಗೆ ಈ ಬಗ್ಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನ ಪರೀಕ್ಷೆಗೆ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಶಿಕ್ಷಕ-ಶಿಕ್ಷಕಿಯರುಗಳಾದ ಶ್ರೀಮತಿ ಹೇಮಲತಾ, ಶ್ರೀಮತಿ ಭಾಗ್ಯ, ಕುಮಾರಿ ಪೂಜಾ, ಶಿವರಾಜ್ ನಾಯಕ್ ಉಪಸ್ಥಿತರಿದ್ದರು.
