March 2, 2026
002

ಹಿರಿಯೂರು:         

ನಗರದ ನೆಹರು ಮೈದಾನದಲ್ಲಿರುವ ರೋಟರಿಸಭಾ ಭವನದಲ್ಲಿ ರೋಟರಿ ಹಿರಿಯೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯೂರು ಹಾಗೂ ಕಂಪೋನಿಯೋ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಉಚಿತ  ಫೂಟ್ ಪಲ್ಸ್ ಥೆರಪಿ ಶಿಬಿರವನ್ನು ಇದೇ ಡಿಸೆಂಬರ್ 18ರಿಂದ 30ರವರೆಗೆ  ಬೆಳಗ್ಗೆ 9ರಿಂದ ಸಂಜೆ 5.30ವರೆಗೆ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್ ಅವರು ಮಾಧ್ಯಮಗಳಿಗೆ  ಮಾಹಿತಿ ನೀಡಿದ್ದಾರೆ.

ವೈದ್ಯಕೀಯವಾಗಿ ಪ್ರಮಾಣಿತವಾದ ಈ ಪೂಟ್ ಪಲ್ಸ್ ಥೆರಪಿ ಮೂಲಕ ರಕ್ತ ಪರಿಚಲನೆ ಹಾಗೂ ನರಗಳ ಯಾವುದೇ ವಿಧದ ಸರಳ ಹಾಗೂ ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರಲ್ಲದೆ,

ಈ ತೆರಪಿಯ ಮೂಲಕ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಪಾರ್ಕಿನ್ ಸನ್, ಸಯಾಟಿಕಾ ಸರ್ವಿಕಲ್ ಸ್ಪಾಂಡಿ ಲೈಟಿಸ್, ನಿದ್ರಾಹೀನತೆ, ಪಾರ್ಶ್ವ ವಾಯು, ಥೈರಾಯ್ಡ್, ಬೆನ್ನು ನೋವು, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿ ಮನವಿ ಮಾಡಿದ್ದಾರೆ. 

About The Author

Leave a Reply

Your email address will not be published. Required fields are marked *