
ಹಿರಿಯೂರು:
ರಾಜ್ಯ ಕಂಡ ಅಪರೂಪದ ರಾಜಕಾರಣಿ, ಬಡವರ ಬಂಧು, ದೀನ ದಲಿತರ ಆಶಾಕಿರಣ, ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಜನಮೆಚ್ಚುಗೆ ಪಡೆದು, ಭಾರತ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಆಯ್ಕೆಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭಗವಂತನು ಆರೋಗ್ಯ ಆಯಸ್ಸು, ಯಶಸ್ಸು ಕೊಟ್ಟು ಕಾಪಾಡಲಿ ಎಂಬುದಾಗಿ ಹಿರಿಯ ಜೆ.ಡಿ.ಎಸ್. ಮುಖಂಡರಾದ ಎಂ.ರವೀಂದ್ರಪ್ಪ ಪ್ರಾರ್ಥಿಸಿದರು.
ನಗರದ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಭಾರತ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಹಾಗೂ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ರವರ ಹುಟ್ಟುಹಬ್ಬದ ಪ್ರಯುಕ್ತ ಜಾತ್ಯತೀತ ಜನತಾದಳ ತಾಲ್ಲೂಕು ಘಟಕದ ವತಿಯಿಂದ ಶ್ರೀತೇರುಮಲ್ಲೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ, ಬೀದಿಬದಿಯ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ,ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ,ರಾಜ್ಯದಲ್ಲಿ 760 ಪ್ರಾಥಮಿಕ ಶಾಲೆಗಳು, 1,000 ಪ್ರೌಢಶಾಲೆಗಳು, 260 ಪದವಿ ಕಾಲೇಜುಗಳು, 500 ಪದವಿ ಪೂರ್ವ ಕಾಲೇಜುಗಳು,7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, 6 ಮೆಡಿಕಲ್ ಕಾಲೇಜುಗಳ ಸ್ಥಾಪನೆ, ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆ ಜೊತೆಗೆ,
ಪ್ರೌಢಶಾಲೆಗಳಲ್ಲಿಯೂ ಬಿಸಿಯೂಟ,1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಘೋಷಣೆ,ಸುವರ್ಣ ಗ್ರಾಮ ಯೋಜನೆ,ರೈತ ಸಿರಿ ಯೋಜನ,ಫೆರಿಪೆರಲ್ ರಿಂಗ್ ರೋಡ್,ಕಾಂಪೀಟ್ ವಿಥ್ ಚೀನಾ,ಸಂಧ್ಯಾ ಸುರಕ್ಷಾ ಯೋಜನೆ, ರೋಶಿಣಿ ಯೋಜನೆ,ಮಾತೃಶ್ರೀ ಯೋಜನೆ ಹಾಗೂ ಕಾವೇರಿ 4ನೇ ಹಂತ, ಬೆಂಗಳೂರಿನ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ / ಹೊಸ ಪ್ರದೇಶಗಳಿಗೆ ಕಾವೇರಿ ನೀರು,ಕೊಡಗಿನ ನೆರೆ ಸಂತ್ರಸ್ತರಿಗೆ ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಶ್ವತ ಮನೆ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ ಹರಿಕಾರ, ಸಾರಾಯಿ ಮತ್ತು ಲಾಟರಿ ನಿಷೇಧ, ಗ್ರಾಮವಾಸ್ತವ್ಯದ ಮೂಲಕ ಹಳ್ಳಿ-ಹಳ್ಳಿಗಳಿಗೆ, ಸರ್ಕಾರ, ಜನತಾ ದರ್ಶನ, ಸುವರ್ಣ ಗ್ರಾಮ ಯೋಜನೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ, ನಮ್ಮ ಮೆಟ್ರೋಗೆ ಅಡಿಗಲ್ಲು ಹಾಕಿದ ನಮ್ಮೆಲ್ಲರ ಮೆಚ್ಚಿನ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮೊತ್ತಮ್ಮೆ ಮುಖ್ಯಮಂತ್ರಿಯಾದರೆ ಜನಪರ ಮತ್ತು ರೈತಪರ ಆಡಳಿತ ಕಾಣಬಹುದು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕೇಕ್ ಕಟ್ ಮಾಡಿ ಸಿಹಿ ತಿನ್ನಿಸುವುದರ ಮೂಲಕ ಮತ್ತು ನೇಕ್ ಬೀಬಿ ದರ್ಗದಲ್ಲಿ ಪೂಜಾ ಸಲ್ಲಿಸಿ, ಮತ್ತು ನಗರದ ಸಮುದಾಯ ಆಸ್ಪತ್ರೆಯ ಎಲ್ಲಾ ರೋಗಿಗಳಿಗೂ ಬ್ರೆಡ್ಡು ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸುವುದರ ಮೂಲಕ ಹೆಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಸಡಗರ-ಸಂಭ್ರಮದಿಂದ ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೆ.ಡಿ.ಎಸ್. ಪಕ್ಷಕ್ಕಾಗಿ ದುಡಿದಂತಹ ಎಲ್ಲಾ ಸಮುದಾಯದ ಹಿರಿಯ ಮುಖಂಡರುಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್.ಮುಖಂಡರಾದ ಎಂ.ರವೀಂದ್ರಪ್ಪ, ತಾಲ್ಲೂಕು ಅಧ್ಯಕ್ಷರಾದ ಎನ್.ಹನುಮಂತರಾಯಪ್ಪ, ಹಿರಿಯ ಮುಖಂಡರಾದ ಗುಣಶೇಖರ್, ಜವಗೊಂಡಳ್ಳಿಮಂಜಣ್ಣ, ಕಾರ್ಯಧ್ಯಕ್ಷರಾದ ಜಾಲ್ದಾಪ್ಪ,ಮಹಾಲಿಂಗಪ್ಪ, ಎಸ್. ಹನುಮಂತಪ್ಪ, ಗಾರೆತಿಮ್ಮಯ್ಯ, ಪೂಜಾರ್ ತಿಮ್ಮಯ್ಯ, ದ್ಯಾಮೇಗೌಡ್ರು, ಮಹಿಳಾ ಅಧ್ಯಕ್ಷೆ ರಾಧಮ್ಮ, ಕರಿಯಪ್ಪ, ಲೋಕೇಶ್, ಮಂಜಣ್ಣ, ಮುಖಂಡರಾದ ನಿಸಾರ್ ಶಾಫಿರ್ , ಬಸವರಾಜ್ ರಂಗಸ್ವಾಮಿ, ಆಲೂರುರಂಗಸ್ವಾಮಿ, ಗುಡ್ಡದರಂಗಪ್ಪ, ದಿವಾಕರ್ , ಅಪ್ಪಾಜಿಗೌಡ , ಪ್ರಕಾಶ್, ಶಿವಮುಂಗಸವಳ್ಳಿ, ತಿಮ್ಮಣ್ಣ , ದಿನೇಶ್, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

