March 2, 2026
0003

ಹಿರಿಯೂರು:

ಇತ್ತೀಚೆಗೆ ಮರಣ ಹೊಂದಿದ ಅಲಮರದಹಟ್ಟಿ ಶಿವಣ್ಣ ಮನೆಗೆ ಬಿಜೆಪಿ ಮುಖಂಡರುಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ ಅವರ ಕುಟುಂಬ ನಿರ್ವಹಣೆಗಾಗಿ ಸ್ಥಳದಲ್ಲೇ 50ಸಾವಿರ ರೂಗಳ ಚೆಕ್ ವಿತರಿಸಿ, ಧನ ಸಹಾಯ ಮಾಡುವ ಮೂಲಕ ಕುಂಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತ ಅಲಮರದಹಟ್ಟಿ ಶಿವಣ್ಣರವರ ಹಿರಿಯ ಮಗಳಾದ ಸಿಂಧು ರವರು ಫಿಜಿಯೋಥೆರಫಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು,   ಸಿಂಧುರವರ  ಫಿಜಿಯೋಥೆರಫಿ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂಬುದಾಗಿ ಈ ಸಂದರ್ಭದಲ್ಲಿ ಭರವಸೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಬಿ.ಜೆ.ಪಿ.ನಿಕಟ ಪೂರ್ವ ಅಧ್ಯಕ್ಷರಾದ ಎ.ಮುರಳಿ, ಹಿರಿಯೂರು ಬಿ.ಜೆ.ಪಿ. ಮಂಡಲ ನಿಕಟ ಪೂರ್ವ ಅಧ್ಯಕ್ಷರಾದ ವಿಶ್ವನಾಥ್, ಜೆ.ಬಿ .ರಾಜಣ್ಣ,  ಗೋವಿಂದಪ್ಪ ,ಪ್ರಜ್ವಲ್, ಗ್ರಾಮ ಪಂಚಾಯತಿ ಸದಸ್ಯರಾದ ವೀರಣ್ಣ, ಆಲಮರದಹಟ್ಟಿ ಶಿವಣ್ಣ, ರವಿಕುಮಾರ್, ಕುಮಾರ್, ನಾಗರಾಜ್ ಸೇರಿದಂತೆ ಹಿರಿಯ ಗ್ರಾಮಸ್ಥರು ಮುಖಂಡರುಗಳು ಉಪಸ್ಥಿತರಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

About The Author

Leave a Reply

Your email address will not be published. Required fields are marked *