March 2, 2026
00002

ಹಿರಿಯೂರು:

ಸಮಾಜದಲ್ಲಿ ಮಹಿಳೆಯರ ಸಾಧನೆಗೆ ಸೂಕ್ತ ಪ್ರಾಶಸ್ತ್ಯ ನೀಡಬೇಕು, ಮಹಿಳೆ ಅಭಿವೃದ್ಧಿಯಾದರೆ ಕುಟುಂಬ, ಗ್ರಾಮ, ದೇಶ ಅಭಿವೃದ್ಧಿಯಾದಂತೆ, ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು  ಎಂಬುದಾಗಿ ವಕೀಲರಾದ ಅನಿಲ್ ಕುಮಾರ್ ಅವರು ಹೇಳಿದರು.

ನಗರದ ಜಗಜ್ಯೋತಿ ಬಸವೇಶ್ವರ ಮಂಗಲಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ‍್ಧಿಯೋಜನೆ, ಜ್ಞಾನವಿಕಾಸ ಮಹಿಳಾ ವಿಕಾಸ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ‍್ಧಿ ಸಂಸ್ಥೆ ಮಹಿಳೆಯರಿಗೆ  ಆರ್ಥಿಕ ವ್ಯವಹಾರ, ಉಳಿತಾಯದ ಜ್ಞಾನ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬನೆಗೆ ಅವಕಾಶ ಕಲ್ಪಿಸಿದ್ದ, ಅದನ್ನು ಇಡೀ ಸಮಾಜಕ್ಕೆ ವಿಸ್ತರಿಸುವ ಕಾರ್ಯ ಮಾಡುತ್ತಿದೆ  ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಎ.ಎಸ್.ಐ.ರೇಖಾ ಅವರು ಮಾತನಾಡಿ, ಕಾನೂನು ಅರಿವು ಕುರಿತು ಮಹಿಳೆಯರಿಗೆ ವಿಶೇಷ ಉಪನ್ಯಾಸ ನೀಡಿದರು.ಈ ಕಾರ್ಯಕ್ರಮದಲ್ಲಿ ಗೀತಾ, ಹೇಮಾವತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ  ರಮೇಶ್, ತ್ರಿಯಂಬಕಮೂರ್ತಿ, ಲತಾ, ರವಿ, ಶಿವಕುಮಾರ್, ರವೀಂದ್ರನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *