March 2, 2026
05

ಹಿರಿಯೂರು:

ನಗರದ ಮೋಕ್ಷಗೊಂಡಮ್ ವಿಶ್ವೇಶ್ವರಯ್ಯ ವಿದ್ಯಾಮಂದಿರ ಆವರಣದಲ್ಲಿ ರೋಟರಿ ಕ್ಲಬ್ ಹಿರಿಯೂರು ಮತ್ತು ಹಾಸ್ಯಪ್ರಿಯರ ಸಂಘ ಹಿರಿಯೂರು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 20ರಂದು  ಸಂಜೆ 6.40ಕ್ಕೆ ಸರಿಯಾಗಿ ‘ಕೊಡಲ್ಲ  ಅಂದ್ರ ಕೊಡಲ್ಲ ‘ಶೀರ್ಷಿಕೆಯ ವಿಡಂಬನೆ ಮಿಶ್ರಿತ ನಗೆ ನಾಟಕವನ್ನು ಏರ್ಪಡಿಸಲಾಗಿದೆ ಎಂಬುದಾಗಿ  ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಹೆಚ್.ಎಂ.ಬಸವರಾಜ್ ಅವರು  ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಒಂದು ಟೀಮ್ ಹಿರಿಯೂರುನದಲ್ಲ. ಬೇರೆ ಕಡೆಯಿಂದ ಹಣವನ್ನು ಪಾವತಿಸಿ ಕರೆಸಲಾಗುತ್ತಿದೆ. 300 ಜನರಿಗೆ ಮಾತ್ರ ಪ್ರವೇಶವಿರುತ್ತದೆ. ನೋಡಲು ಇಚ್ಚಿಸುವ ಪ್ರತಿಯೊಬ್ಬರು ಪಾಸನ್ನು ಹೆಚ್.ಎಂ.ಬಸವರಾಜ್ ಅವರಿಂದ ಪಡೆದುಕೊಂಡು ಉಚಿತವಾಗಿ ಪ್ರದರ್ಶನವನ್ನು ನೋಡಬಹುದು ಎಂದರಲ್ಲದೆ,

ಸಂಜೆ 6:40ಕ್ಕೆ ಸರಿಯಾಗಿ ಪ್ರದರ್ಶನ ಪ್ರಾರಂಭವಾಗುತ್ತದೆ. ಎರಡು ಗಂಟೆಗಳ ನಾಟಕ. ನಕ್ಕು ನಕ್ಕು ಸಾಕಾಗುತ್ತದೆ .ಇಚ್ಛೆ ಪಟ್ಟವರು ಪಾಸ್ ಅನ್ನು ಪಡೆಯಿರಿ. ಕೇವಲ 300 ಜನರಿಗೆ ಮಾತ್ರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ ಮತ್ತು ಪಾಸ್ ಅನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

ಈ ಕೆಳಗಿನ ಕರಪತ್ರ ಎಲ್ಲವನ್ನು ವಿವರಿಸುತ್ತದೆ, ನಕ್ಕು  ನಕ್ಕು ಹೊಟ್ಟೆ ಹುಣ್ಣಾಗಬೇಕು ಅದು ಹಾಸ್ಯ .ಈ ರೀತಿಯ ಒಂದು ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಲಾವಿದರನ್ನ ಆಹ್ವಾನಿಸಲು ಹಣವನ್ನು ತೆತ್ತಿದ್ದೇವೆ. ಪಾಸ್ ಬೇಕಾದಲ್ಲಿ ಎಚ್.ಎಂ.ಬಸವರಾಜ್ ಅವರಲ್ಲಿ ಹೆಸರನ್ನು ನೋಂದಾಯಿಸಿ ಪಡೆಯಬಹುದು.

ಕೇವಲ 300 ಜನರಿಗೆ ಮಾತ್ರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಒಂದು ಅಪರೂಪದ ಕಾರ್ಯಕ್ರಮ .ನಮ್ಮ ಊರಿನಲ್ಲೇ ನಡೆಯಲಿದೆ. ಅದು ಕೂಡ ಉಚಿತವಾಗಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಹೆಸರು ನೊಂದಾಯಿಸಿಕೊಂಡು ನಗೆ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಕ್ಕುನಲಿಯಬೇಕು ಎಂಬುದಾಗಿ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *