
ಹಿರಿಯೂರು:
ನಗರದ ಮುಖ್ಯರಸ್ತೆಯ ವೇದಾವತಿ ನದಿ ಸೇತುವೆಯಿಂದ ಟಿ.ಬಿ.ಸರ್ಕಲ್ ವರೆಗೆ ಈಗಾಗಲೇ ತುಂಬಾ ದಿನಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ರಸ್ತೆಗೆ ಜಲ್ಲಿಕಲ್ಲು ತುಂಬಲಾಗಿದ್ದು, ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಬದಿಯ ಬಡಾವಣೆ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬುದಾಗಿ ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ವಿದ್ಯುತ್ ಕಂಬಗಳಿಗೆ ಹೆಚ್ಚುವರಿ ಯಾವುದೇ ಬೀದಿದೀಪಗಳನ್ನು ಅಳವಡಿಸಿರುವುದಿಲ್ಲ.ರಸ್ತೆ ಕಾಮಗಾರಿಗೆ ಜಲ್ಲಿಕಲ್ಲು ತುಂಬಿ ಜನರು ಓಡಾಡಲು, ದ್ವಿಚಕ್ರವಾಹನ ಚಾಲಕರಿಗೆ ಹೆಚ್ಚು ತೊಂದರೆಯಾಗುತ್ತಿದೆ, ರಸ್ತೆ ಬದಿಯಲ್ಲಿ ಯಾವುದೇ ವಿದ್ಯುತ್ ದೀಪಗಳು ಇಲ್ಲದಿರುವುದರಿಂದ ರಾತ್ರಿ ವೇಳೆ ವಾಹನ ಸವಾರರು ಹಾಗೂ ಸಾರ್ವಜನಿಕರು ಕತ್ತಲಿನಲ್ಲಿ ಓಡಾಡಲು ಕಷ್ಟಪಡುವಂತಾಗಿದೆ.

ಈ ಕೂಡಲೇ ನಗರಸಭೆ ಮುಖ್ಯಸ್ಥರು ಹಾಗೂ ಪೌರಾಯುಕ್ತರು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಹೆಚ್ಚು ಬೀದಿದೀಪಗಳನ್ನು ಅಳವಡಿಸಿ ಜನಗಳ ತೊಂದರೆ ನಿವಾರಣೆ ಮಾಡಲು ಮುಂದಾಗಬೇಕು ಎಂಬುದಾಗಿ ಸಾರ್ವಜನಿಕರು “ಹಿರಿಯೂರು ನ್ಯೂಸ್” ತಂಡದ ಮೂಲಕ ನಗರಸಭೆ ಪೌರಾಯುಕ್ತರಾದ ಎ.ವಾಸೀಂರವರಲ್ಲಿ ಮನವಿ ಮಾಡಿದ್ದಾರೆ.

