March 2, 2026
02

ಹಿರಿಯೂರು:

ತಾಲ್ಲೂಕಿನ ಐಮಂಗಲ ಹೋಬಳಿಯ ಆದಿರಾಳು ಮತ್ತು ಚಿಕ್ಕೀರಣ್ಣ ಮಾಳಿಗೆಯಲ್ಲಿ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ  ಡಿಸೆಂಬರ್ 13ರ ಶನಿವಾರದಿಂದ ಡಿಸೆಂಬರ್ 15ರ ಸೋಮವಾರದವರೆಗೆ  ಶ್ರೀವೀರಾಂಜನೇಯಸ್ವಾಮಿಯ ಕಾರ್ತಿಕ ಮಹೋತ್ಸವವನ್ನು  ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ದೇವಸ್ಥಾನ ಆಡಳಿತ ಮಂಡಳಿ ಸಮಿತಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ಡಿಸೆಂಬರ್ 13ರ ಶನಿವಾರ ಸಂಜೆ 6.30ಕ್ಕೆ ಕದ್ಲಿಪೂಜೆ, ರಾತ್ರಿ 7.30ಕ್ಕೆ ಆದಿರಾಳು ಹಾಗೂ ಸಿ.ಎನ್.ಮಾಳಿಗೆ ಗ್ರಾಮದ ಸುಮಂಗಲಿಯರಿಂದ ಆರತಿ ನಂತರ ಆದಿರಾಳು ಯುವಕಮಿತ್ರರಿಂದ ಅನ್ನಸಂತರ್ಪಣೆ ನಡೆಯಲಿದೆ.

ಡಿಸೆಂಬರ್ 14ರ ಭಾನುವಾರ ರಾತ್ರಿ 8ಗಂಟೆಗೆ ಶ್ರೀವೀರಾಂಜನೇಯಸ್ವಾಮಿಯ ಹೂವಿನಪಲ್ಲಕ್ಕಿ ಉತ್ಸವ, ಡಿಸೆಂಬರ್ 15ರ ಸೋಮವಾರ ಬೆಳಗ್ಗೆ 10ಗಂಟೆಯಿಂದ ಲೆಕ್ಕ-ಪತ್ರ ಪರಿಶೀಲನೆ ನಡೆಯಲಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ನಂತರ ಶ್ರೀ ಸ್ವಾಮಿಯ ಮಹಾಮಂಗಳಾರತಿ ಮತ್ತು ಹೂವಿನ ಹಾರ ಹರಾಜು ನಂತರ ಪ್ರಸಾದ ವಿನಿಯೋಗ ನಡೆಯಲಿದೆ .ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *