March 3, 2026
00007

ಹಿರಿಯೂರು:

ಪರಿಶಿಷ್ಟಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗದವರು ಸಮಾಝದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ನೀಡುವ ಆರ್ಥಿಕ  ನೆರವನ್ನು  ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ  ಬಳಸಿಕೊಳ್ಳಬೇಕು ಎಂಬುದಾಗಿ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ   ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆಯ ಎಸ್.ಎಫ್.ಸಿ. ನಿಧಿಯಡಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಸಮುದಾಐದ ವಿದ್ಯಾರ್ಥಿಗಳು, ಅಂಗವಿಕಲರು, ಪೌರಕಾರ್ಮಿಕರು ಅಲೆಮಾರಿ ಸಮುದಾಯದವರಿಗೆ 2019-2020ರಿಂದ 2025-26ನೇ ಸಾಲಿನವರೆಗಿನ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ನೀಡುವ ಸವಲತ್ತುಗಳು  ದುರುಪಯೋಗವಾಗುತ್ತಿವೆ ಎಂಬ ಆರೋಪಗಳಿವೆ. ಸರ್ಕಾರ ಬಡವರ ಬಗ್ಗೆ ಹೊಂದಿರುವ ಕಾಳಜಿಯನ್ನು ಫಲಾನುಭವಿಗಳು ಅರ್ಥ ಮಾಡಿಕೊಳ್ಳಬೇಕು. ನಿಗದಿತ ಉದ್ದೇಶಕ್ಕೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ  ಕುಟುಂಬದ ಆರ್ಥಿಕತೆ ಸುಧಾರಣೆ ಮಾಡಿಕೊಳ್ಳಬೇಕು  ಎಂಬುದಾಗಿ ಅವರು ಹೇಳಿದರು.

 ಫಲಾನುಭವಿಗಳಿಗೆ ಟಾರ್ಪಲಿನ್, ತ್ರಿಚಕ್ರವಾಹನ, ಗ್ಯಾಸ್ ಸಿಲಿಂಡರ್ ಮುಂತಾದವುಗಳನ್ನು ಸಚಿವರು ವಿತರಿಸಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ತಹಶೀಲ್ದಾರ್ ಎಂ.ಸಿದ್ಧೇಶ್,  ಪೌರಾಯುಕ್ತರಾದ ಎ.ವಾಸಿಂ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಕಾಂಗ್ರೆಸ್ ಮುಖಂಡರುಗಳಾದ ನಗರಸಭೆ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ, ಮಾಜಿ ಪೌರಾಯುಕ್ತ ಸದಸ್ಯರಾದ  ಬಿ.ಎನ್. ಪ್ರಕಾಶ್, ವಿಠ್ಠಲ್ ಪಾಂಡುರಂಗ, ಮಮತಾ, ಮಂಜುಳಾ, ಈರಲಿಂಗೇಗೌಡ, ಜಿ.ಎಲ್.ಮೂರ್ತಿ, ಸಾದತ್ ಉಲ್ಲಾ, ಕಲ್ಲಟ್ಟಿ ಹರೀಶ್, ಜಿ.ದಾದಾಪೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *