March 6, 2026
00000001

ಹಿರಿಯೂರು :

ವಿಶ್ವದ ವಿವಿಧ ಭಾಷೆಗಳಲ್ಲಿ ಕನ್ನಡ ಸುಂದರ ಹಾಗೂ ಸುಮಧುರ ಭಾಷೆಯಾಗಿದ್ದು, ದೇಶ, ಭಾಷೆ, ಧರ್ಮ, ಜಾತಿ, ಬುಡಕಟ್ಟು ಮೀರಿ, ಜನರ  ಮನಸ್ಸು ಮನಸ್ಸುಗಳನ್ನು ಬೆಸೆಯುವ ಕೊಂಡಿಯಾಗಿದೆ, ಕನ್ನಡ ಭಾಷೆ ಅತ್ಯದ್ಭುತವಾದ ಸರಳ ಸುಲಲಿತ ಹೃದಯಸ್ಪರ್ಶಿ ಭಾಷೆಯಾಗಿದೆ ಎಂಬುದಾಗಿ ನಿವೃತ್ತ ಪ್ರಾಚಾರ್ಯ ಹಾಗೂ ಖ್ಯಾತ ಜಾನಪದ ತಜ್ಞರಾದ ಡಾ. ಸಿ.ಶಿವಲಿಂಗಪ್ಪ ಹೇಳಿದರು.      

ನಗರದ ನೆಹರು ಮೈದಾನದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ, ವಾಣಿವಿಲಾಸ ವಿದ್ಯಾಸಂಸ್ಥೆ ಹಿರಿಯೂರು ಇವರುಗಳ ಸಂಯುಕ್ತಾಕ್ಷರದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು ನುಡಿ ನೆಲ ಜಲ ಸಂಪತ್ತು ರಕ್ಷಣೆಗೆ ವಿಶ್ವದ ಎಲ್ಲ ಕನ್ನಡಿಗರು ಹೋರಾಟ ಮಾಡಬೇಕಿದೆ ಕನ್ನಡದ ಅಸ್ಮಿತೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿ ಬೂಕರ್ ಪ್ರಶಸ್ತಿ ತಂದ ಬಾನು ಮುಸ್ತಾಕ್ ರವರನ್ನ ಇಂದು ನೆನೆಯಬೇಕಿದೆ, ರಾಷ್ಟ್ರ ಕವಿಗಳಾದ ಎಂ.ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಸೇರಿದಂತೆ ನಾಡಿನ ದಾಸರು, ಶರಣರು ವಚನಕಾರರು ದಲಿತ ಸಾಹಿತಿಗಳು, ಹೀಗೆ ಹಲವಾರು ಮಹನೀಯರು ಕನ್ನಡ ಭಾಷೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂಬುದಾಗಿ ಹೇಳಿದರು.

ಖ್ಯಾತ ಸಮಾಜ ವಿಜ್ಞಾನಿ ಡಾ. ಡಿ.ಧರಣೇಂದ್ರಯ್ಯ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ಜನಸಾಮಾನ್ಯರ ಭಾಷೆಯಾಗಿದ್ದು, ಕರ್ನಾಟಕ ಸರ್ಕಾರ 1969ರಲ್ಲಿ ಆಡಳಿತ ಭಾಷೆಯನ್ನಾಗಿ ಘೋಷಣೆ ಮಾಡಿದೆ, ಕನ್ನಡ ಭಾಷಾ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಕನ್ನಡಪರ ಸಂಘಟನೆಗಳನ್ನು ಸ್ಥಾಪಿಸಿ ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸುತ್ತಿದೆ, ನಾಡಿನ ರೈತರು, ವರ್ತಕರು, ಕೃಷಿ ಕಾರ್ಮಿಕರು, ಮಹಿಳೆಯರು, ಮಕ್ಕಳು ಕನ್ನಡ ಭಾಷೆಯನ್ನ ಜೀವಂತ ಉಳಿಸಿದ್ದಾರೆ ಎಂದು ಹೇಳಿದರು.                         

ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ, ಮಾತನಾಡಿ, ಪ್ರಾದೇಶಿಕ ಭಾಷೆ ಹಾಗೂ ಎದೆಯ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳಸುವ ಕೆಲಸವನ್ನು ಕನ್ನಡಿಗರಾದ ನಾವೆಲ್ಲರೂ ಮಾಡಬೇಕಿದೆ, ಕನ್ನಡ ಮಾಧ್ಯಮ ಓದಿದ ಮಕ್ಕಳಿಗೆ ಉದ್ಯೋಗ ನೀಡಬೇಕು, ಕನ್ನಡ ನಾಡು ವಿವಿಧ ಭಾಷೆ ವಿವಿಧ ಧರ್ಮ ವಿವಿಧ ಬುಡಕಟ್ಟು ಜನರಿದ್ದರೂ ಸಹ ಸೌಹಾರ್ದತೆ ಸಹಬಾಳ್ವೆ ಸಮಗ್ರತೆ ಹಾಗೂ ಐಕ್ಯತೆಗೆ ಹೆಸರಾಗಿದೆ ಎಂದರು.

ಕಾರ್ಯಕ್ರಮಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರು ಹನುಮಂತರಾಯಪ್ಪ ಮಾತನಾಡಿ, ತಾಲೂಕಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ, 1979ರಲ್ಲಿ ನಾಡೋಜ ಡಾ.ಎಚ್.ಎಲ್.ನಾಗೇಗೌಡರು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ತು ರಾಜ್ಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ, ಹಾಗೆ ತಾಲೂಕಿನಲ್ಲಿ ಜಾನಪದ ಕಲಾಮೇಳ, ಜಾನಪದ ಸಂಭ್ರಮ ನಾಟಕ ಪ್ರದರ್ಶನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಾನಪದ ಅಸ್ಮಿತೆಯನ್ನ ತಾಲೂಕಿನಲ್ಲಿ ಉಳಿಸಿಕೊಂಡು ಬಂದಿದೆ ಎಂದು ಹೇಳಿದರು.

ಇದೇ ವೇಳೆ ಚುಂಚ ಶ್ರೀಪ್ರಶಸ್ತಿ ಪುರಸ್ಕೃತರಾದ ಹರಿಯಬ್ಬೆ ಜಿ,ಡಿ,ತಿಮ್ಮಯ್ಯ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪುರಸ್ಕೃತರಾದ ಆರ್.ಟಿ.ಪರಮೇಶ್ವರಪ್ಪ, ತಾಲೂಕು ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ವಿ.ಸಿದ್ದಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಬಿ.ಲಿಂಗಪ್ಪ, ಹಿರಿಯರ ರಂಗಭೂಮಿ ಕಲಾವಿದ  ಬ್ಯಾಡರಹಳ್ಳಿ ಪಿ,ತಿಮ್ಮಯ್ಯ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಸಿದ್ದಗಂಗಮ್ಮ, ಕರಿಓಬೇನಹಳ್ಳಿ ಡಿ.ಪ್ರಹ್ಲಾದ್, ಸರಸ್ವತಿ, ಆಶಾ, ಕಲಾವಿದ ಕೂನಿಕೆರೆಮಾರುತೇಶ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್.ರಮೇಶ್, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮಹೇಶ್ವರ ರೆಡ್ಡಿ, ಶಿಕ್ಷಣಾಧಿಕಾರಿ ಸಂಘಗಳ ತಾಲೂಕು ಅಧ್ಯಕ್ಷರಾದ ಭಾಗ್ಯಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಚಿಕ್ಕಣ್ಣ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಲೋಕಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ  ಹರ್ತಿಕೋಟೆ ಮಹಾಸ್ವಾಮಿ ,ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜೆ.ನಿಜಲಿಂಗಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಜಂಟಿ ಕಾರ್ಯದರ್ಶಿ ಜಿ.ಹನುಮಂತರೆಡ್ಡಿ, ಎಂ.ರಮೇಶ ನಾಯ್ಕ್, ಪಿ.ತಿಪ್ಪೇಸ್ವಾಮಿ, ಹೆಚ್.ಶಿವಮೂರ್ತಿ, ಎಸ್.ಶಿವಲಿಂಗಪ್ಪ, ಲಕ್ಷ್ಮಿಕಾಂತ್ ಆಚಾರ್, ಪರಮೇಶ ಆಚಾರ್, ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಗಂಗಮ್ಮ, ಪೂಜಾ, ಶಿಕ್ಷಕರುಗಳಾದ ಉಮೇಶ್ ಯಾದವ್, ಶಿವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *