
ಹಿರಿಯೂರು:
ನಗರದ ನೆಹರು ಮೈದಾನದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀಶಕ್ತಿಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಅಸಂಶನ್ ಚರ್ಚಿನ ಕ್ರಿಶ್ಚಿಯನ್ ಸಮುದಾಯದ ಧರ್ಮ ಗುರುಗಳಾದ ಫಾದರ್ ಡಿಕ್ಯೂನಿಯ ಫಾದರ್ ವಿಜಯಕುಮಾರ್ ಸಿಸ್ಟರ್ ಮೆರನಿತ ಸಿಸ್ಟರ್ ಮಾರ್ಥ, ನಗರಸಭಾ ಸದಸ್ಯರಾದ ಮೊದಲಮರಿಯ ಸಮಾಜದ ಮುಖಂಡರಾದ ಮೈಕಲ್ ಇವರುಗಳು ಶ್ರೀ ಶಕ್ತಿಗಣಪತಿಯ ಆಶಿರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಇವರುಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಶಕ್ತಿ ಗಣಪತಿ ಪೂಜಾ ಸಮಿತಿಯ ಅಧ್ಯಕ್ಷರು ಖಾದಿ ಜೆ.ರಮೇಶ್, ಉಪಾಧ್ಯಕ್ಷರಾದ ಈ. ಶಿವಣ್ಣ, ವಕೀಲರಾದ ಮಹಂತೇಶ್, ನಗರಸಭೆ ಗಿರೀಶ್ ಕುಮಾರ್ ನಾಯಕ್, ಅಣ್ಣೇಶ್, ಪಟೇಲ್, ಮಾರುತಿ, ಗುರುಪ್ರಸಾದ್, ವಿಜಯಕುಮಾರ್, ದರ್ಶನ್, ಶಾಹಿದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

