March 5, 2026
000003

ಹಿರಿಯೂರು:

ನಗರದಲ್ಲಿನ ಏಕೈಕ  ಸಿ.ಎನ್.ಜಿ. ಗ್ಯಾಸ್ ಬಂಕ್  ಅನಿರ್ದಿಷ್ಟ ಕಾಲಕ್ಕೆ ಸ್ಥಗಿತಗೊಂಡಿರುವುದು ಆಟೋ ಡ್ರೈವರ್ ಗಳ ಜೀವನವನ್ನು ತೀವ್ರ ಸಂಕಷ್ಟಕ್ಕೆ ಗುರಿಮಾಡಿದೆ, ಇಂಧನ ಲಭ್ಯವಿಲ್ಲದೇ ನೂರಾರು ಆಟೋಗಳು ರಸ್ತೆಗೆ ಬರಲಾಗದೆ, ಚಾಲಕರು ದಿನನಿತ್ಯದ ಆದಾಯ ಕಳೆದುಕೊಂಡಿದ್ದಾರೆ ಎಂಬುದಾಗಿ ಆಟೋ ಡ್ರೈವರ್ ಗಳು ತಮ್ಮ ನೋವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಆಟೋ ಡ್ರೈವರ್ ಗಳು ತಮ್ಮ ಬೇಸರ ವ್ಯಕ್ತಪಡಿಸಿ ಮಾತನಾಡಿ “ನಾವು ದಿನನಿತ್ಯ ಆಟೋ ಓಡಿಸಿ ಜೀವನ ಕಟ್ಟಿಕೊಳ್ಳುತ್ತಿದ್ದೇವೆ. ಇಂತಹ ಸಮಸ್ಯೆಗಳು ಬಂದಾಗ ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಆಟೋ ಡ್ರೈವರ್ ಗಳ ನೆರವಿಗೆ ನಿಲ್ಲಬೇಕು. ಇಲ್ಲವಾದರೆ ನಮ್ಮ ಕುಟುಂಬದ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.”ಎಂಬುದಾಗಿ ತಮ್ಮ ಅಳಲನ್ನು ತೋಡಿಕೊಂಡರು.

ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಚಾಲಕರಲ್ಲಿ ಮತ್ತಷ್ಟು ಅಸಮಾಧಾನ ಮೂಡಿಸಿದೆ. ಇದರಿಂದ ಸಿ.ಎನ್.ಜಿ. ಪಂಪ್ ತಕ್ಷಣ ಪುನರಾರಂಭ ಮಾಡುವಂತೆ ಒತ್ತಾಯಿಸಿ ಆಟೋ ಡ್ರೈವರ್ ಗಳು ಮುಷ್ಕರ ಆರಂಭಿಸಿದ್ದು, ಕೂಡಲೇ ಸಿ.ಎನ್.ಜಿ. ಪಂಪ್ ಪುನರಾರಂಭ ಮಾಡುವಂತೆ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *