March 5, 2026
004

ಹಿರಿಯೂರು :     

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿಗಳ ವಿಭಾಗದ ಮುಖ್ಯ ಅಭಿಯಂತರರು ಹಾಗೂ ನಾಲ್ಕು ಬಾರಿ ಸರ್ಕಾರಿ ನೌಕರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ, ಚಿತ್ರದುರ್ಗ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಗೌರವಾಧ್ಯಕ್ಷರು ಹಾಗೂ ಸ್ನೇಹಜೀವಿಗಳು ಆದಂತಹ ಕೆ.ಜಿ.ಜಗದೀಶ್ ರವರು ವಯೋನಿವೃತ್ತಿ ಹೊಂದಿರುತ್ತಾರೆ.

ಆರಂಭದಲ್ಲಿ ಶ್ರೀಯುತ ಕೆ.ಜಿ.ಜಗದೀಶ್ ರವರು ಹಿರಿಯೂರಿನ ಪಿ.ಡಬ್ಲೂ.ಡಿ ಇಲಾಖೆಯಲ್ಲೂ ಸಹ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಅತ್ಯಂತ ಜನಪರ ಹಾಗೂ ಜನಸ್ನೇಹಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು, ಇವರ ವಯೋನಿವೃತ್ತಿ ಜೀವನವು ಉಜ್ವಲವಾಗಿರಲಿ, ಬದುಕಿನಲ್ಲಿ ಸುಖ-ಶಾಂತಿ-ನೆಮ್ಮದಿ ತುಂಬಿರಲಿ, ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ವತಿಯಿಂದ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ, ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಶ್ರೀಪಾದ್ ವಸಿಷ್ಠ, ಉಮೇಶ್ ಯಾದವ್, ಶಿವರಾಜ್ ನಾಯಕ, ಪರಮೇಶ್ವರಪ್ಪ, ಹಿದಾಯತ್ ವುಲ್ಲಾ, ಇರ್ಫಾನ್ ವುಲ್ಲಾ,ಇವರುಗಳು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *