March 2, 2026
00003

ಹಿರಿಯೂರು:

ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡುವ ಉದ್ದೇಶದಿಂದ ನಗರಸಭೆ ವತಿಯಿಂದ ಪ್ರತಿ ಶನಿವಾರ “ನಮ್ಮ ಚಿತ್ತ ಸ್ವಚ್ಛತೆಯತ್ತ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ನಾಗರೀಕರು ನಗರವನ್ನು ಸ್ವಚ್ಛಗೊಳಿಸಲು ನಗರಸಭೆಯೊಂದಿಗೆ ಕೈಜೋಡಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರ ವ್ಯಾಪ್ತಿಯ ವಾರ್ಡ್ ನಂ 22 ರ ಜೆ.ಕೆ.ಗಾರ್ಡನ್ ನ 2 ಪಾರ್ಕ್ ಗಳಲ್ಲಿ ಶನಿವಾರದಂದು ಸ್ವಚ್ಛತಾ ಇ ಸೇವಾ ಕಾರ್ಯಕ್ರಮದಡಿ “ನಮ್ಮ ಚಿತ್ತ ಸ್ವಚ್ಛತೆಯತ್ತ” ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಮೂಲಕ ಪಾರ್ಕ್ ಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ವ್ಯವಸ್ಥಾಪಕರಾದ ಮಂಜುಳಾ, ಎಇಇ ಶ್ರೀರಂಗ, ಅಕೌಂಟ್ ಸೂಪರ್ ಡೆಂಟ್ ಗೋವಿಂದರಾಜು, ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂದ್ಯಾ, ಅಶೋಕ್, ಸುನೀಲ್, ಮಹಾಲಿಂಗರಾಜು, ದಫೆದಾರ್ ಗಳು ಸೇರಿದಂತೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *