

ಹಿರಿಯೂರು:
ಅಖಿಲ ಕುಂಚಿಟಿಗರ ಮಹಾಮಂಡಲ ಮತ್ತು ಕುಂಚಿಟಿಗರ ವಿದ್ಯಾಭಿವೃದ್ಧಿ ಸಂಘ ಸಹಯೋಗದಲ್ಲಿ ಜಾತಿಜನಗಣತಿ ಜಾಗೃತಿ ಸಮಾವೇಶವನ್ನುಇದೇ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 10 -30 ಕ್ಕೆ ತುಮಕೂರು ನಗರದ ಕುಂಚಶ್ರೀ ಪ್ಯಾಲೇಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರರಾದ ಎಸ್. ವಿ. ರಂಗನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ರಾಜ್ಯಸರ್ಕಾರ ಇದೇ ಸೆಪ್ಟೆಂಬರ್ 22ರಿಂದ ಜಾತಿಜನಗಣತಿ ಸಮೀಕ್ಷೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ 19 ಜಿಲ್ಲೆಗಳು 47 ತಾಲ್ಲೂಕುಗಳಲ್ಲಿರುವ 27ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ ಎಲ್ಲರೂ ಸರ್ಕಾರಿ ಮಾನ್ಯತೆ ಹೊಂದಿರುವ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಮತ್ತು ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿ ಪ್ರಕಾರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಓ.ಬಿ.ಸಿ. ಮೀಸಲಾತಿಗೆ ಶಿಫಾರಸ್ಸು ಮಾಡಿರುವ ಪ್ರಕಾರ “ಕುಂಚಿಟಿಗ ” ಎಂದು ಏಕರೀತಿಯಲ್ಲಿ ಬರೆಯಿಸುವ ಬಗ್ಗೆ ಚರ್ಚಿಸಲಾಗುತ್ತದೆ. ಎಂದರಲ್ಲದೆ,
“ಕುಂಚಿಟಿಗ ” ಎಂದು ಏಕರೀತಿಯಲ್ಲಿ ಬರೆಯಿಸುವ ಬಗ್ಗೆ ಚರ್ಚಿಸಲು ಮತ್ತು ಕುಂಚಿಟಿಗ ಜಾತಿ ಯಾವುದೇ ಜಾತಿಯ ಉಪಜಾತಿಯಲ್ಲ.ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜಾತಿ ಎಂಬ ಸತ್ಯವನ್ನು ದಾಖಲೆಗಳ ಸಹಿತ ಸಾಬೀತುಪಡಿಸುವ ಸದುದ್ದೇಶವನ್ನು ಈ ಸಮಾವೇಶವು ಒಳಗೊಡಿದೆ ಎಂಬುದಾಗಿ ಅವರು ಹೇಳಿದರು.
ಆದ್ದರಿಂದ, ರಾಜ್ಯಮಟ್ಟದ ಎಲ್ಲಾ ಕುಂಚಿಟಿಗ ಸಂಘ ಸಂಸ್ಥೆಗಳ ಮುಖಂಡರು, ಸಮಸ್ತ ಕುಂಚಿಟಿಗ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.