March 2, 2026
0003

ಹಿರಿಯೂರು:

ಕನ್ನಡನಾಡಿನಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಬೆಳವಣಿಗೆಗೆ ಕನ್ನಡಿಗರಾದ ನಾವು ಶ್ರಮಿಸಬೇಕು ಎಂಬುದಾಗಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ.ಮುಖಂಡರು, ಜಿಲ್ಲಾ ಕೊರ್ ಕಮಿಟಿ ಸದಸ್ಯರು, ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್.ಆರ್.ಲಕ್ಷ್ಮಿಕಾಂತ್ ಹೇಳಿದರು.

ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ಆಟೋಚಾಲಕ ಮಾಲೀಕರ ಸಂಘ ವತಿಯಿಂದ ಅದ್ದೂರಿಯಾಗಿ  ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಹಿರಿಯೂರು ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷರಾದ  ಅಭಿನಂದನ್ , ಬಬ್ಬೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ  ಕರಿಯಣ್ಣ, ಬಿ.ಜೆ.ಪಿ. ತಾಲ್ಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ಎನ್.ಚಿತ್ತಯ್ಯ,  ಗೋವಿಂದಪ್ಪ,  ನಾಗಣ್ಣ,  ಮಂಜುನಾಥ,  ಬಸವರಾಜ,  ದೇವರಾಜ,  ಜೈಕೃಷ್ಣ,  ವಿಜಯ್,  ರಂಗನಾಥ  ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *