
ಹಿರಿಯೂರು :
ಸಮಾಜದಲ್ಲಿ ಇಂದು ಅನೇಕ ದಂಪತಿಗಳು ಮಕ್ಕಳಿಲ್ಲದೆ ಕೊರಗುತ್ತಿದ್ದು, ಮಕ್ಕಳಾಗದವರ ಕಷ್ಟ ಅವರಿಗೆ ಮಾತ್ರ ಗೊತ್ತು, ಅಂತಹ ದಂಪತಿಗಳಿಗೆ ಜನನಿ ಐವಿಎಫ್ ಸೆಂಟರ್ ನವರು ಹಮ್ಮಿಕೊಂಡಿರುವ ಈ ಶಿಬಿರವು ನಿಜಕ್ಕೂ ವರದಾನವಾಗಿದೆ, ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ದಂಪತಿಗಳು ನಿಮ್ಮ ಸಮಸ್ಯೆಯನ್ನು ಯಾವುದೇ ಸಂಕೋಚವಿಲ್ಲದೆ ವೈದ್ಯರ ಬಳಿ ಹೇಳಿಕೊಳ್ಳುವ ಮೂಲಕ ಸೂಕ್ತ ಚಿಕಿತ್ಸೆ ಹಾಗೂ ಸಲಹೆ-ಸೂಚನೆಗಳನ್ನು ಪಡೆದು, ಮಕ್ಕಳನ್ನು ಪಡೆಯಬಹುದಾಗಿದೆ ಎಂಬುದಾಗಿ ಜಿ.ಪಂ.ಮಾಜಿ ಅಧ್ಯಕ್ಷರು ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿರುವ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜನನಿ ಫರ್ಟಿಲಿಟಿ ಮತ್ತು ಐ.ವಿ.ಎಫ್. ಸೆಂಟರ್ ತುಮಕೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ರೋಟರಿ ಸಂಸ್ಥೆ ಹಿರಿಯೂರು ಶಾಖೆ, ಸರ್ವೋದಯ ಥಿಯೋಸಾಫಿಕಲ್ ಸೊಸೈಟಿ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ತುಮಕೂರಿನ ಜನನಿ ಫರ್ಟಿಲಿಟಿ ಐ.ವಿ.ಎಫ್. ಮತ್ತು ಎಂಡೋ ಸರ್ಜರಿ ಸಂಸ್ಥೆಯ ತಜ್ಞ ವೈದ್ಯರಾದ ಡಾ.ನಾಗೇಶ್ ಕುಮಾರ್, ಹಾಗೂ ಶ್ರೀಮತಿ ಡಾ.ಹಂಸನಾಗೇಶ್ ಇವರುಗಳು ಜನಪ್ರಿಯ ವೈದ್ಯರುಗಳಾಗಿದ್ದು, ಮಕ್ಕಳಾಗದ ದಂಪತಿಗಳಿಗೆ ಐ.ವಿ.ಎಫ್.ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ, ಇವರು ಈಗಾಗಲೇ ನೂರಾರು ದಂಪತಿಗಳಿಗೆ ಐ.ವಿ.ಎಫ್ ಚಿಕಿತ್ಸೆಯನ್ನು ನೀಡುವ ಮೂಲಕ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳಭಾಗ್ಯ ಪಡೆಯಲು ನೆರವಾಗಿದ್ದಾರೆ, ಮಕ್ಕಳಾಗದ ದಂಪತಿಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಮಾತನಾಡಿ, ನಮ್ಮ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು, ಇದೀಗ ಮಕ್ಕಳಿಲ್ಲದ ದಂಪತಿಗಳ ಅನುಕೂಲಕ್ಕಾಗಿ ಜನನಿ ಫರ್ಟಿಲಿಟಿ ಐ.ವಿ.ಎಫ್. ಮತ್ತು ಎಂಡೋ ಸರ್ಜರಿ ಸಂಸ್ಥೆ ಸಹಯೋಗದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಮಕ್ಕಳಿಲ್ಲದ ದಂಪತಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ನಗರದ ಮನವಿ ಟ್ರಸ್ಟ್ ಅಧ್ಯಕ್ಷರು ಹಾಗೂ ಸೋಷಿಯಲ್ ವರ್ಕರ್ ಶ್ರೀಮತಿ ಮಾನಸಮಂಜುನಾಥ್ ಮಾತನಾಡಿ, ಇಂದಿನ ಸಮಾಜದಲ್ಲಿ ನೂರಾರು ದಂಪತಿಗಳು ಮಕ್ಕಳಿಲ್ಲದೆ ಕೊರತೆಯನ್ನು ಎದುರಿಸುತ್ತಿದ್ದು, ಅಂತಹ ದಂಪತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ತುಮಕೂರಿನ ಜನನಿ ಫರ್ಟಿಲಿಟಿ ಐ.ವಿ.ಎಫ್. ಮತ್ತು ಎಂಡೋ ಸರ್ಜರಿ ಸಂಸ್ಥೆಯು ಮುಂದೆ ಬಂದಿರುವುದು ನಿಜಕ್ಕೂ ಸಂತಸದ ವಿಚಾರವಾಗಿದ್ದು, ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಕಾಳಜಿ ಹಾಗೂ ಸಮಾಜದ ಬಗ್ಗೆ ಅತ್ಯಂತ ಕಳಕಳಿ ಹೊಂದಿರುವ ರೆಡ್ ಕ್ರಾಸ್, ರೋಟರಿ, ಸಂಸ್ಥೆಗಳು ಜನನಿ ಫರ್ಟಿಲಿಟಿ ಮತ್ತು ಐ.ವಿ.ಎಫ್.ಸೆಂಟರ್ ಸಹಯೋಗದಲ್ಲಿ ಸಂತಾನ ಸಮಸ್ಯೆ ಇರುವ ದಂಪತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ ಹಾಗೂ ಸಲಹಾ ಶಿಬಿರ ಹಮ್ಮಿಕೊಂಡಿದ್ದು, ಇದೊಂದು ವಿಶಿಷ್ಟ ಶಿಬಿರವಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆ ವತಿಯಿಂದ ವೇದಿಕೆಯಲ್ಲಿದ್ದ ಮುಖ್ಯಅತಿಥಿಗಳು ಹಾಗೂ ಗಣ್ಯರಿಗೆ ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ವಿಕಾಸ್ ಜೈನ್, ಥಿಯಾಸಫಿಕಲ್ ಸೊಸೈಟಿ ಅಧ್ಯಕ್ಷರಾದ ರಂಗನಾಥ್, ಜನನಿ ಫರ್ಟಿಲಿಟಿ ಐ.ವಿ.ಎಫ್. ಮತ್ತು ಎಂಡೋ ಸರ್ಜರಿ ಸಂಸ್ಥೆಯ ತಜ್ಞ ವೈದ್ಯರುಗಳಾದ ಡಾ.ನಾಗೇಶ್ ಕುಮಾರ್, ಶ್ರೀಮತಿ ಡಾ.ಹಂಸನಾಗೇಶ್, ಪಿ.ಆರ್.ಸತೀಶ್ ಬಾಬು, ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಪೂಜಾ, ಉಮೇಶ್ ಯಾದವ್, ಶಿವರಾಜ್ ನಾಯಕ, ವಿದ್ಯಾಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು, ಜನನಿ ಆಸ್ಪತ್ರೆಯ ಪಿ.ಆರ್.ಓ ರಾಜಣ್ಣ, ಡಾ.ಮೋಹನ್, ಲೆಕ್ಕಾಧಿಕಾರಿ ಮೋಹನ್ ಕುಮಾರ್, ಶುಶೃಷಕರಾದ ಶ್ರೀಮತಿ ಭಾರತಿ, ಶ್ರೀಮತಿ ಶೋಭಾ, ಸೇರಿದಂತೆ ಶಿಬಿರಾರ್ಥಿಗಳು, ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

