
ಹಿರಿಯೂರು:
ನಗರದ ನಗರಸಭೆಯ 2019-20ನೇ ಸಾಲಿನಿಂದ 2024-25ನೇ ಸಾಲಿನ ನಗರಸಭೆ ನಿಧಿ ಹಾಗೂ ಎಸ್.ಎಫ್.ಸಿ. ಯೋಜನೆಯಡಿ ಶೇ.24.10, ಶೇ.7.25 ಹಾಗೂ ಶೇ.5ರಅನುದಾನದಲ್ಲಿ ಮೀಸಲಿರಿಸಿರುವ ಯೋಜನೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಮಾಧ‍್ಯಮಗಳಿಗೆ ತಿಳಿಸಿದ್ದಾರೆ.
ಯೋಜನೆಗಳಡಿ ಪರಿಶಿಷ್ಠಜಾತಿ, ಪರಿಶಿಷ್ಟಪಂಗಡ ಜನಾಂಗದ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕ ನೆರವು, ಕುಡಿಯುವ ನೀರಿನ ಸಂಪರ್ಕ,ಶುಲ್ಕ ವೆಚ್ಚ ಭರಿಸುವುದು, ಇತರೆ ಜನಾಂಗದ ಎಲ್.ಎಲ್.ಬಿ.ಪದವಿ ಹೊಂದಿರುವ ವೃತ್ತಿನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲು ಧನಸಹಾಯ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.
ಇತರೆ ಜನಾಂಗದ ಸಣ್ಣ ಉದ್ಧಿಮೆದಾರರಿಗೆ ಸಹಾಯ, ದಿವ್ಯಾಂಗ ವಿಶೇಷ ಚೇತನರಿಗೆ ವೀಲ್ ಚೇರ್ ಖರೀದಿಸಿ ನೀಡಲಾಗುವುದು. ಡಿಸೆಂಬರ್ 6ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನಗರದ ನಾಗರೀಕರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
