March 3, 2026
06

ಹಿರಿಯೂರು:      

ತಾಲ್ಲೂಕಿನ ವೇಣುಕಲ್ಲುಗುಡ್ಡ ಶ್ರೀಯತ್ತಪ್ಪಸ್ವಾಮಿ ದೇವರ ಜಾತ್ರೆ ಮಹೋತ್ಸವವು ಡಿಸೆಂಬರ್ 1 ಸೋಮವಾರದಂದು ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಶ್ರೀ ಯತ್ತಪ್ಪಸ್ವಾಮಿ ಜಾತ್ರೆಯನ್ನು ಈ ಭಾರಿ ಅದ್ದೂರಿಯಾಗಿ ನಡೆಸಲು ಶ್ರೀಸ್ವಾಮಿಯ ದೇವಸ್ಥಾನದ ಸಮಿತಿ ತೀರ್ಮಾನಿಸಿದೆ.

ಪ್ರೇರಾಣಾನುಸಾರ ನವಂಬರ್ 28ರಂದು ಶುಕ್ರವಾರ ಹಟ್ಟಿಯ ಬೆಳಗು ಪೂಜೆ 29 ರಂದು ಶನಿವಾರ ಝಾಂಡೇದ ಹಬ್ಬ, 30ಭಾನುವಾರ ಶ್ರೀಹಾಲು ಮೀಸಲು ಕರೆಯುವುದು, ಡಿಸೆಂಬರ್ 1ರಂದು ಸೋಮವಾರ ಬೆಳಿಗ್ಗೆ 6:30 ರಿಂದ ಹುತ್ತದ ಪೂಜೆ, 9 ಗಂಟೆಗೆ ಶ್ರೀಯತ್ತಪ್ಪಸ್ವಾಮಿ ಕಟ್ಟೆಗೆ ಹೋಗಿ ಗಂಗಾ ಪೂಜೆ ನಡೆಯಲಿದೆ.

ನಂತರ, ಸಂಜೆ ಮರವಣಿಗೆ ನಂತರ ಎಡೆ ಹಾಕುವುದು. 2 ರಂದು ಮಂಗಳವಾರ ಬೆಳಗ್ಗೆ ಅಣ್ಣತಮ್ಮಂದಿರು 6 ಸೇರುವ ಅಕ್ಕಿ ಅಕ್ಕಿ ಅಳೆಯುವುದು. ಮಧ್ಯಾಹ್ನ 3 ಗಂಟೆಗೆ ಅನ್ನ ಸಂತರ್ಪಣೆ ರಾತ್ರಿ 9:00 ಗಂಟೆಗೆ ಕುಡಕ ಕಟ್ಟಿದ ತಾಳಿ ಸಾಮಾಜಿಕ ನಾಟಕ, ಮೂರರಂದು ಬುಧವಾರ ಬೆಳಿಗ್ಗೆ 9:30ಕ್ಕೆ ನಾಗಣ್ಣ ನಾಗಮ್ಮ ದೇವರು ಮತ್ತು ಶ್ರೀ ಚಿತ್ರಲಿಂಗೇಶ್ವರ ಸ್ವಾಮಿಯ ಆನೆ ಅಂಬಾರಿ ಕದಿರಿ ನರಸಿಂಹ ಸ್ವಾಮಿ ಸಿಂಹ ವಾಹನೋತ್ಸವ ಮತ್ತು ಗರುಡ ವಾಹನೋತ್ಸವದೊಂದಿಗೆ ಶ್ರೀವೀರನಾಗಮ್ಮನ ಗುಡ್ಡೆಗೆ ಹೋಗಿ ಹಿಟ್ಟಿಕ್ಕೆ ಏರುವುದು ನಂತರ ಉಂಡೆ ಮಂಡೆ ಕಾರ್ಯಕ್ರಮ,

ಸಂಜೆ ಮೆರವಣಿಗೆ 4 ರಂದು ಗುರುವಾರ ಬೆಳಗ್ಗೆ 6 ಗಂಟೆಗೆ ದೇವರು ಗುಡಿ ದುಂಬುವುದು ನಂತರ ಅಣ್ಣ-ತಮ್ಮಂದಿರ ಜಾಡಿಯ ಮೇಲೆ ಖರ್ಚು ವೆಚ್ಚ ಹಾಕುವುದು ನಂತರ ಎಡೆ ಹಿಡಿಯುವುದು. 6ರಂದು ಶನಿವಾರ ಮರು ದೀಪೋತ್ಸವ ಜಾತ್ರೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಅಣ್ಣತಮ್ಮಂದಿರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ ಧನದೊಂದಿಗೆ ಸಹಕರಿಸಿ ಶ್ರೀ ಯತ್ತಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪಕರು ಗೌಡ ಪೂಜಾರಿಗಳು ಹಟ್ಟಿ ಯಜಮಾನರು ಗುಡಿ ಕಟ್ಟಿನ ಅಣ್ಣ ತಮ್ಮಂದಿರು ಮತ್ತು ನೆಂಟರು ಹಾಗೂ ವೇಣುಕಲ್ಲು ಗುಡ್ಡ ಗ್ರಾಮಸ್ಥರು ಭಕ್ತಾದಿಗಳು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಜಾತ್ರೆ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

About The Author

Leave a Reply

Your email address will not be published. Required fields are marked *