
ಹಿರಿಯೂರು :
ಬಳ್ಳಾರಿ ವೆಟ್ರನ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬಳ್ಳಾರಿಯಲ್ಲಿ ನಡೆದ 45ನೇರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಸಮನ್ವಯ ಸ್ಪೋರ್ಟ್ಸ್ ಕ್ಲಬ್ ನ ಕೋಶಾಧ್ಯಕ್ಷ ಮಹಮದ್ ಜಪ್ರುದ್ದೀನ್ 60+ವಿಭಾಗ 100ಮೀಟರ್ ಸ್ಪರ್ಧೆಯಲ್ಲಿ ತೃತೀಯಸ್ಥಾನವನ್ನು ಪಡೆದಿದ್ದಾರೆ.

ಬಳ್ಳಾರಿಯಲ್ಲಿ ನಡೆದ 45ನೇರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 60+ವಿಭಾಗ 100ಮೀಟರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುವ ಮಹಮ್ಮದ್ ಜಪ್ರುದ್ದೀನ್ (ಪಂಟುಚಿಚ್ಚ) ರವರಿಗೆ ಸಮನ್ವಯ ಸ್ಪೋರ್ಟ್ಸ್ ಕ್ಲಬ್ ಮತ್ತು ವಾಕಿಂಗ್ ಗ್ರೂಪ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರ ವತಿಯಿಂದ ಅಭಿನಂದನೆಗಳನ್ನು ತಿಳಿಸಲಾಗಿದೆ.


