
ಹಿರಿಯೂರು:
ನಗರದ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀರಾಮಕೃಷ್ಣರವರ ಮಗ ಸುಭಾಷ್ ಎ.ಆರ್. ಇವರು ನವಂಬರ್ 13ರಂದು ಸುಳ್ಯದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷದ ಬಾಲಕರ ಕ್ರೀಡಾಕೂಟದಲ್ಲಿ 80ಮೀಟರ್ ಹರ್ಡಲ್ಸ್ ನಲ್ಲಿ ದೂರವನ್ನು 12.02 ಸೆಕೆಂಡ್ ನಲ್ಲಿ ಕ್ರಮಿಸಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ ಎಂಬುದಾಗಿ ಮಾಧ್ಯಮಗಳಿಗೆ ಮಾಹಿತಿ ತಿಳಿದುಬಂದಿದೆ.

ಇದೇ ನವಂಬರ್ 20 ಮತ್ತು 21 ರಂದು ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 400ಮೀಟರ್, 80 ಮೀಟರ್ ಹರ್ಡಲ್ಸ್ ಮತ್ತು 4*400 ರಿಲೈ ನಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗೆ ಪೋಲೀಸ್ ಇಲಾಖೆಯ ವರಿಷ್ಠ ಅಧಿಕಾರಿಗಳು ಹಾಗೂ ನಗರದ ಸಂಘಸಂಸ್ಥೆಗಳು, ನಗರದ ನಾಗರೀಕರು ಶುಭ ಹಾರೈಸಿದ್ದಾರೆ.


