March 2, 2026
0002

ಹಿರಿಯೂರು:

ನಗರದ ನೆಹರು ವೃತ್ತ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಮತ್ತು ಸರ್ಕಾರಿ ಆಸ್ಪತ್ರೆ ಬಳಿ ಇರುವ ಟಾರ್ ರೋಡುಗಳಲ್ಲಿ ಉಬ್ಬುಗಳನ್ನು ಹಾಕಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಬಹಳ ಅನುಕೂಲವಾಗಿದ್ದು, ಟಾರ್ ರೋಡುಗಳಲ್ಲಿ ಉಬ್ಬುಗಳ ಹಾಕಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ  ಸಿ.ಕೆ.ಗುಜ್ಜಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ಬಗ್ಗೆ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ರವರಿಗೆ ಸಾರ್ವಜನಿಕರ ಪರವಾಗಿ ತುಂಬಾ ಧನ್ಯವಾದಗಳನ್ನು ಅರ್ಪಿಸಿದ ಅವರು  ರಸ್ತೆಯಲ್ಲಿ ಹಾಕಿರುವ ಉಬ್ಬುಗಳು ಕಾಣದೆ ಇರುವುದರಿಂದ ಅಮಾಯಕರು ಉಬ್ಬುಗಳು ಇವೆ ಎಂಬುದು ಅರಿವಿಲ್ಲದೆ ಈಗಾಗಲೇ 3-4 ಜನ ಬೈಕ್ ಸವಾರರು ವೇಗವಾಗಿ ಬಂದು ಬಿದ್ದು ಅನಾಹುತಕ್ಕೆ ಒಳಗಾಗಿರುತ್ತಾರೆ. ಆದ್ದರಿಂದ ದಯಮಾಡಿ ಹುಬ್ಬುಗಳಿಗೆ ಬಿಳಿ ಬಣ್ಣ ಬಳಿಸಲು ಸಾರ್ವಜನಿಕರ ಪರವಾಗಿ ಅವರು ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *