
ಹಿರಿಯೂರು :
ಮಕ್ಕಳಿಗೆ ಚಳಿಗಾಲದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅತ್ತ್ಯುತ್ತಮ ಗುಣಮಟ್ಟದ ಹಾಗೂ ಚಳಿಗಾಲಕ್ಕೆ ಉಪಯುಕ್ತವಾದ ‘ ಸ್ವೆಟರ್ ‘ ‘ಟೋಪಿ ‘ ಮತ್ತು ಬಿಸ್ಕೆಟ್ ಪ್ಯಾಕೆಟ್ ನ್ನು ಕೊಡಲಾಗುತ್ತಿದೆ, ಮಕ್ಕಳು ಇದನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದಾಗಿ ಶ್ರೀಮತಿ ಸೀತಮ್ಮ ಶ್ರೀನಿವಾಸನ್ ಹೇಳಿದರು.

ತಾಲ್ಲೂಕಿನ ಗೋಪಾಲಪುರದ ಸರ್ಕಾರಿ ಪ್ರಾಥಮಿಕ ಶಾಲೆಯ 1ರಿಂದ 7ನೇ ತರಗತಿಯ ಸುಮಾರು 135 ಮಕ್ಕಳಿಗೆ ಅತ್ತ್ಯುತ್ತಮ ಗುಣಮಟ್ಟದ ಹಾಗೂ ಚಳಿಗಾಲಕ್ಕೆ ಉಪಯುಕ್ತವಾದ ‘ ಸ್ವೆಟರ್ ‘ ‘ಟೋಪಿ ‘ ಮತ್ತು ಬಿಸ್ಕೆಟ್ ಪ್ಯಾಕೆಟ್ ನ್ನು ಉಚಿತವಾಗಿ ವಿತರಿಸಿ, ನಂತರ ಅವರು ಮಾತನಾಡಿದರು.

ಶ್ರೀಮತಿ ಸೀತಮ್ಮ ಶ್ರೀನಿವಾಸನ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಇವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಅರೋಗ್ಯ ,ಆನಂದ, ನೆಮ್ಮದಿಯ ಜೀವನ ನೀಡಿ ತಮ್ಮ ಕೊಡುಗೆಯನ್ನು ಸದಾ ಶಿಕ್ಷಣ ಕ್ಷೇತ್ರಕ್ಕೆ ನೀಡುವಂತಾಗಲಿ ಎಂಬುದಾಗಿ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದ್ದಾರೆ.


