
ಹಿರಿಯೂರು:
ತಾಲ್ಲೂಕಿನ ವೇಣುಕಲ್ಲುಗುಡ್ಡದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಇದೇ ಡಿಸೆಂಬರ್ 1ರ ಸೋಮವಾರದಂದು ಶ್ರೀಯತ್ತಪ್ಪಸ್ವಾಮಿ ಜಾತ್ರೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ದೇವಸ್ಥಾನದ ವ್ಯವಸ್ಥಾಪಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನವಂಬರ್ 28ರ ಶುಕ್ರವಾರ ಹಟ್ಟಿಯ ಬೆಳಗು ಪೂಜೆ, ನವಂಬರ್ 29ರ ಶನಿವಾರ ಝಾಂಡೇದ ಹಬ್ಬ, ನವಂಬರ್ 30ರ ಭಾನುವಾರ ಶ್ರೀ ಹಾಲು ಮೀಸಲು ಕರೆಯುವುದು, ಡಿಸೆಂಬರ್ 1ರ ಸೋಮವಾರ ಬೆಳಗ್ಗೆ 6-30ಕ್ಕೆ ಹುತ್ತದ ಪೂಜೆ ಮತ್ತು 9ಗಂಟೆಗೆ ಶ್ರೀಯತ್ತಪ್ಪಸ್ವಾಮಿ ಕಟ್ಟೆಗೆ ಹೋಗಿ ಗಂಗಾಪೂಜೆ ನಂತರ ಸಂಜೆ ಮೆರವಣಿಗೆ ನಂತರ ಎಡೆ ಹಾಕುವುದು.
ಇದೇ ಡಿಸೆಂಬರ್ 2ರ ಮಂಗಳವಾರ ಬೆಳಗ್ಗೆ ಅಣ್ಣ-ತಮ್ಮಂದಿರು 6 ಸೇರು ಅಕ್ಕಿ ಅಳೆಯುವುದು, ಮಧ್ಯಾಹ್ನ 3ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9 ಗಂಟೆಗೆ “ಕುಡುಕ ಕಟ್ಟಿದ ತಾಳಿ” ಎಂಬ ಸಾಮಾಜಿಕ ನಾಟಕವಿರುತ್ತದೆ.
ಡಿಸೆಂಬರ್ 3ರ ಬುಧವಾರ ಬೆಳಗ್ಗೆ 9.30ಕ್ಕೆ ಶ್ರೀನಾಗಣ್ಣನಾಗಮ್ಮ ದೇವರು ಮತ್ತು ಶ್ರೀ ಚಿತ್ರಲಿಂಗೇಶ್ವರಸ್ವಾಮಿಯ ಆನೆಅಂಬಾರಿ, ಕದರಿನರಸಿಂಹಸ್ವಾಮಿಯ ಸಿಂಹವಾಹನೋತ್ಸವ ಮತ್ತು ಗರುಡವಾಹನೋತ್ಸವದೊಂದಿಗೆ ಶ್ರೀ ವೀರನಾಗಮ್ಮ ಗುಡ್ಡೆಗೆ ಹೋಗಿ ಹಿಟ್ಟಕ್ಕಿ ಏರುವುದು ನಂತರ ಹುಂಡೆ, ಮಂಡೆ ಕಾರ್ಯಕ್ರಮವಿರುತ್ತದೆ. ಸಾಯಾಂಕಾಲ ವಿಜೃಂಭಣೆಯಿಂದ ಮೆರವಣಿಗೆ ಇರುತ್ತದೆ.
ಡಿಸೆಂಬರ್ 4ರ ಗುರುವಾರ ಬೆಳಗ್ಗೆ 6ಗಂಟೆಗೆ ದೇವರು ಗುಡಿದುಂಬುವುದು ನಂತರ ಅಣ್ಣ-ತಮ್ಮಂದಿರು, ಜಾಡಿಯ ಮೇಲೆ ಖರ್ಚು ವೆಚ್ಚ ಹಾಕುವುದು, ನಂತರ, ಎಡೆ ಹಿಡಿಯುವುದು ಡಿಸೆಂಬರ್ 6ರ ಶನಿವಾರದಂದು ಮರುದೀಪೋತ್ಸವ ಇರುತ್ತದೆ.
ಆದ್ದರಿಂದ ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಿಗೆ ಅಣ್ಣ-ತಮ್ಮಂದಿರು, ಭಕ್ತಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನದೊಂದಿಗೆ ಸಹಕರಿಸಿ ಶ್ರೀ ಯತ್ತಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ವಿನಂತಿಸಿದ್ದಾರೆ.

