
ಹಿರಿಯೂರು:
ಇದೇ ಡಿಸಂಬರ್ 15ರಂದು ಕುಂಚಿಟಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡುವ ಜೊತೆಗೆ ಹಿರಿಯ ನಾಗರೀಕರಿಗೆ ಸನ್ಮಾನ ಕೈಗೊಳ್ಳಲಾಗುವುದಲ್ಲದೆ, ಜನವರಿ 2026ರ ಮಾಹೆಯಲ್ಲಿ ರಾಜ್ಯಾಧ್ಯಕ್ಷರು ಹಾಗೂ ನೀರಾವರಿ ಹೋರಾಟಗಾರರಾದ ಕಸವನಹಳ್ಳಿ ರಮೇಶ್ ರವರ ನೇತೃತ್ವದಲ್ಲಿ ತಮಿಳುನಾಡು ಪ್ರವಾಸ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂಬುದಾಗಿ ಕುಂಚಿಟಿಗರ ಸಂಘದ ಪ್ರಧಾನಕಾರ್ಯದರ್ಶಿಗಳಾದ ಕೆ.ಜಿ.ಹನುಮಂತರಾಯಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕುಂಚಿಟಿಗರ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಶಿವಣ್ಣರವರ ಅಧ್ಯಕ್ಷತೆಯಲ್ಲಿ ಸಂಘದ ಸದಸ್ಯರಿಗೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ನಂತರ ಅವರು ಮಾತನಾಡಿದರು.
ಈ ಸಭೆಯಲ್ಲಿ ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಎಂ.ಆರ್.ಜೋಗೇಶ್, ಖಜಾಂಚಿ ಮಂಜನಾಥ, ಕಾತ್ರಿಕೇನಹಳ್ಳಿ, ಚೇತನ್ ಗೌಡ, ದಿಂಡವರಚಂದ್ರಗಿರಿ, ಕೆ.ಕೆ.ಹಟ್ಟಿಜಯಪ್ರಕಾಶ್, ಮಾಸ್ತಿಕಟ್ಟೆ ಚಂದ್ರಶೇಖರ್, ವಾಣಿಮಹಾಲಿಂಗಪ್ಪ, ಕುಸುಮವಿ.ವಿ.ಪುರ, ಅಡ್ವಕೇಟ್ ಲಕ್ಷ್ಮಣ್ ಗೌಡ್ರು, ಶಶಿಕಲಾ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

