March 2, 2026
00001

ಹಿರಿಯೂರು:

ಗಿಡ-ಮರಗಳು ಮಳೆಯ ಮಾರುತಗಳನ್ನು ಸೆಳೆದು  ತರುವುದು, ನೆರಳನ್ನು ಮಾತ್ರ ನೀಡುವುದಿಲ್ಲ.ಅರಣ್ಯ ಪ್ರದೇಶದಲ್ಲಿನ ಸಾವಿರಾರು ಗಿಡಗಳು ಜನ-ಜಾನುವಾರುಗಳ ಜೀವ ಉಳಿಸುವ ಔಷಧೀಯ ಗುಣಗಳನ್ನು  ಹೊಂದಿವೆ ಎಂಬುದಾಗಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ಹೇಳಿದರು.

ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಧಾತ್ರಿಪೂಜಾ ಕಾರ್ಯಕ್ರಮದಲ್ಲಿ ನೆಲ್ಲಿ ಗಿಡವನ್ನು ನೆಡುವುದರ ಮೂಲಕ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಯುನಾನಿ, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಗಿಡ-ಮರಗಳಿಂದ ಔಷಧಿ ತಯಾರಿಸಲಾಗುತ್ತದೆ. ನೆಲ್ಲಿ ಗಿಡ ಶಕ್ತಿ ವರ್ಧಕವಾಗಿದ್ದು, ಅನೇಕ ಪೋಷಕಾಂಶಗಳ ಕಣಜವಾಗಿದೆ.ಎಲ್ಲರೂ ಮರ-ಗಿಡಗಳ ರಕ್ಷಣೆಗೆ ಪ್ರತಿಜ್ಞೆ ಮಾಡಬೇಕು ಎಂಬುದಾಗಿ ಅವರು ಹೇಳಿದರು.ಶಾಲಾ ಆಡಳಿತ ಮಂಡಳಿಯವರು ಗಿಡ-ಮರಗಳನ್ನು  ಬೆಳೆಸುವುದರಿಂದ ಸಾರ್ವಜನಿಕರಿಗೆ ದೊರೆಯುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅವರು ಮಾಹಿತಿ  ನೀಡಿದರು.

ಕಾರ್ಯಕ್ರಮದ ಪ್ರಾಯೋಜಕ ನಿವೃತ್ತ ಪ್ರಾಚಾರ್ಯರಾದ ಬಿ.ಕೆ.ನಾಗಣ್ಣಅವರು ಮಾತನಾಡಿ ಕಾರ್ತಿಕಾ ಮಾಸದಲ್ಲಿ ಈ ಪೂಜೆ ಮಾಡುವುದರಿಂದ ಎಲ್ಲರಿಗೂ ಸುಖ-ಶಾಂತಿ ಲಭಿಸಲಿದೆ ಎಂಬುದಾಗಿ ಅವರು ಹೇಳಿದರು.

ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದ ನಂತರ ವನಬೋಜನಾ ಏರ್ಪಡಿಸಲಾಗಿತ್ತು. ಈಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿಯ ಗೌರಾವಾಧ್ಯಕ್ಷರಾದ ಎಲ್.ಆನಂದಶೆಟ್ಟಿ, ಅಧ್ಯಕ್ಷ ಸತ್ಯನಾರಾಣ್, ಕಾರ್ಯದರ್ಶೀ ಪಿ.ವಿ.ನಾಗರಾಜ್, ವಾಗ್ದೇವಿ ಶಾಲೆಯ ಕಾಲೇಜಿನ ಕೆ.ಜಿ.ಶ್ರೀಧರ್,  ವಾಸವಿ ಕ್ಲಬ್ ಮಾಜಿ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಅಮರೇಶ್, ವಾಸವಿ ಯುವಜನ ಸಂಘದ ಜಗದೀಶ್, ಆರ್ಯ ವೈಶ್ಯ ಸಮುದಾಯದ ಮುಖಂಡರು, ವಾಗ್ದೇವಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *