

ಹಿರಿಯೂರು:
ನಗರದ ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಆಪರೇಷನ್ ಗಳಿಗಾಗಿ ವಿಶೇಷ ಉಚಿತ ತಪಾಸಣಾ ಶಿಬಿರವನ್ನು ಸೆಪ್ಟಂಬರ್ 13ರ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಶಿಬಿರವು ವಾಸವಿ ವಿದ್ಯಾವರ್ಧಕ ಸಂಘ, ರೋಟರಿ ಹಿರಿಯೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಹಿರಿಯೂರು ಮತ್ತು ಲಕ್ಷ್ಮೀ ಸರ್ಜಿಕಲ್ ಟ್ರಾಮಾ ಆರ್ಥೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಣೆಬೆನ್ನೂರು ಹಾಗೂ ಶ್ರೀ ಲಕ್ಷ್ಮೀ ಆರೋಗ್ಯ ಮತ್ತು ಶಿಕ್ಷಣ ಸಮಗ್ರ ಅಭಿವೃದ‍್ಧಿ ಸೇವಾ ಸಂಸ್ಥೆ, ರಾಣೆಬೆನ್ನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಪ್ರಖ್ಯಾತ ಮೊಣಕಾಲು ಚಿಪ್ಪು ಬದಲಾವಣೆ ತಜ್ಞರಾ ಡಾ.ಸಂಜೀವ ಎಂ.ಮುದ್ರಿ ಇವರಿಂದ ಮೊಳಕಾಲು ಚಿಪ್ಪು ಬದಲಾವಣೆ ಮತ್ತು ತಪಾಸಣೆ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೆ.ವಿ.ಅಮರೇಶ್ ರವರು ಮನವಿ ಮಾಡಿದ್ದಾರೆ.
ರೋಗದತೀವ್ರತೆ ಮತ್ತು ಯಶಸ್ವಿನಿಕಾರ್ಡ್ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಲಯನ್ಸ್ ಐ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ವಿ.ಅಮರೇಶ್ ಮೊ.ನಂ.9845565179, ತಾಲ್ಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿಗಳಾದ ಶಿವಮೂರ್ತಿ, ಜಿಲ್ಲಾ ಸಂಯೋಜಕರಾದ ಶಶಿಕುಮಾರ, ರೋಟರಿ ಸಂಸ್ಥೆ ಅಧ್ಯಕ್ಷರಾದ ಕೆ.ಎ.ವರುಣ, ರೋಟರಿ ಸಂಸ್ಥೆ ಕಾರ್ಯದರ್ಶಿಗಳಾದ ವಿಕಾಸ ಡಿ.ಜೈನ್, ರೆಡ್ ಕ್ರಾಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರ್ ರಾಜ್, ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಡಾ.ಸಂಜೀವ ಮುದ್ರಿ ಮೊ.ನಂ.9242215990, ವೀರೇಶ ಮೊ.ನಂ.9986398004 ಇವರುಗಳನ್ನು ಸಂಪರ್ಕಿಸಬಹುದು ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.