March 3, 2026
0004

 

ಹಿರಿಯೂರು:

ಸ್ವಾಮಿ ವಿವೇಕಾನಂದರಿಗೆ ತಾವು ಓದಿದ ವಿಷಯ ಯಾವ ಪುಸ್ತಕದಲ್ಲಿ ಯಾವ ಪುಟದಲ್ಲಿದೆ ಎಂಬುದು ಗೊತ್ತಿರುತ್ತಿತ್ತು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರಲ್ಲಿದ್ದ ಏಕಾಗ್ರತೆ ರೂಢಿಸಿಕೊಂಡರೆ ಕಲಿಕೆ ಸುಲಭವಾಗುತ್ತದೆ ಎಂಬುದಾಗಿ ಸಂಪನ್ಮೂಲ ವ್ಯಕ್ತಿ ಉಡುಪಿಯ ಸಾಲಿಗ್ರಾಮದ ಡಿವೈನ್ ಪಾ ರ್ಕ್ ನ ಕವಿತಾ ಅವರು ಹೇಳಿದರು.

ನಗರದ ಹುಳಿಯಾರು ರಸ್ತೆಯಲ್ಲಿರುವ ರಾಷ್ಟ್ರೀಯ  ಅಕಾಡೆಮಿ ಶಾಲೆಯಲ್ಲಿ ಹಿರಿಯೂರು ಜಾಗೃತಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ದೀಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಓದು ನಮ್ಮ ಶಕ್ತಿ.ಅದನ್ನು ಕಲಿಯಲೂ ಯುಕ್ತಿಯೂ ಬೇಕು. ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಕೇಳಿಸಿಕೊಳ್ಳಬೇಕು. ಮನೆಗೆ ಹೋಗಿ ಸ್ವಲ್ಪ ವಿರಾಮ ಪಡೆದ ನಂತರ ಪಾಠವನ್ನು ಮನನ ಮಾಡಬೇಕು. ಎಂದರಲ್ಲದೆ,

ಅರ್ಥವಾಗದ ವಿಷಯಗಳ ಪಟ್ಟಿ ಸಿದ‍್ದಪಡಿಸಿ ಮರುದಿನ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಬೇಕು. ಇದನ್ನು ರೂಢಿಸಿಕೊಂಡಾಗ ಓದಿನ ಬಗ್ಗೆ ಆಸಕ್ತಿಯ ಜೊತೆಗೆ  ಧೈರ್ಯವೂ ಬರುತ್ತದೆ. ಕಲಿಕೆಯನ್ನು ಶಿಕ್ಷೆ ಎಂದು ಭಾವಿಸದೆ, ನಮ್ಮ ಭವಿಷ್ಯಕ್ಕೆ ಬೇಕಾಗಿರುವ ಅಡಿಗಲ್ಲು ಎಂಬುದಾಗಿ ತಿಳಿದು ಸಾಗಬೇಕು ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮವನ್ನು  ಜಾಗೃತಿ ಬಳಗದ ಚಂದ್ರಶೇಖರ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಮಗೇಶ್ವರಿ ಅಧ್ಯಕ್ಷತೆ ವಹಿಸಿದ್ದರು.  ಬಳಗದ ಸದಸ್ಯೆ  ಶ್ರೀಮತಿ ಅನಿತಾ ಶಿವಮೂರ್ತಿ, ಶಶಿಕಲಾ ಹಾಜರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 250 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ವಿವೇಕ ಜಾಗೃತ ಬಳಗದ ಚಂದ್ರಶೇಖರ್, ಅನಿತಾ, ಶಿವಮೂರ್ತಿ, ಶಶಿಕಲಾ, ತನ್ನೀರ್ ಕುಮಾರಿ, ರಾಷ್ಟ್ರೀಯ ಅಕಾಡೆಮಿ ಶಾಲೆಯ ಮುಖ್ಯಶಿಕ್ಷಕರಾದ ಮಹೇಶ್ವರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *