March 6, 2026
00001

ಹಿರಿಯೂರು :

ನಗರದ ಶ್ರೀಕಾಳಿಕಾದೇವಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರ್ತಿಕ ಪೂಜಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 24ರ ಶುಕ್ರವಾರದಿಂದ ನವಂಬರ್ 21ರ ಶುಕ್ರವಾರದವರೆಗೆ ಕಾರ್ತಿಕ ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಅರ್ಚಕರಾದ ಹೆಚ್.ವಿ.ನಾಗರಾಜ್  ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೇ ನವಂಬರ್ 21 ರ ಶುಕ್ರವಾರದಂದು ಕಡೇ ಕಾರ್ತಿಕೋತ್ಸವದ ಪ್ರಯುಕ್ತ  ಶ್ರೀಕಾಳಿಕಾದೇವಿ ಅಮ್ಮನವರ ವಿಶೇಷ ಅಭಿಷೇಕ, ಅರ್ಚನೆ, ಪೂಜೆ ಹಾಗೂ ಸಾಯಂಕಾಲ ಪೂಜೆ, ದೀಪೋತ್ಸವ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ ಎಂಬುದಾಗಿ ಅವರು ತಿಳಿಸಿದ್ದಾರಲ್ಲದೆ,

ಕಡೇ ಕಾರ್ತಿಕದಂದು ಕಲ್ಲುಕಂಬದ ದೀಪೋತ್ಸವ ಪೂಜೆ ಹಾಗೂ ಅಮ್ಮನವರಿಗೆ ವಿಶೇಷ ಅಲಂಕಾರ ಇರುತ್ತದೆ. ವಿಶ್ವಕರ್ಮ ಸಮಾಜದ ಬಾಂಧವರು ಮತ್ತು ಸರ್ವ ಭಕ್ತಾದಿಗಳು ಕಾರ್ತಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತನು, ಮನ, ಧನ ಸಹಾಯದೊಂದಿಗೆ ಸಹಕರಿಸಲು ಅವರು ಮನವಿ ಮಾಡಿದ್ದಾರೆ.

ನವಂಬರ್ 21 ರ ಶುಕ್ರವಾರದಂದು ನಡೆಯಲಿರುವ ಕಡೇ ಕಾರ್ತಿಕೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9731643619, 9686499646, 7899246460 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ತಾಯಿ ಶ್ರೀಕಾಳಿಕಾದೇವಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ಅವರು ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *