March 2, 2026
03

ಹಿರಿಯೂರು:

ನಗರದ ಚಿಕ್ಕಪೇಟೆ ಬಳಿ ಇರುವ ಶ್ರೀರಾಘವೇಂದ್ರಸ್ವಾಮಿ  ಮಠದಲ್ಲಿ ಇದೇ 20ರ ಗುರುವಾರ ಕಡೆ ಕಾರ್ತಿಕ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯಿಂದ ಭಜನೆ ಕಾರ್ಯಕ್ರಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಇರುತ್ತದೆ. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಉಪಹಾರದ ವ್ಯವಸ್ಥೆ  ಮಾಡಲಾಗಿರುತ್ತದೆ.

ಇದರ ಅಂಗವಾಗಿ ದೇವಾಲಯದಲ್ಲಿ ಸಂಜೆ ದೀಪೋತ್ಸವ ಕಾರ್ಯಕ್ರಮ ಇರುತ್ತದೆ. ಪೂಜೆ ಮಾಡಿಸುವ ಭಕ್ತರು ಅರ್ಚಕರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಕೋರಲಾಗಿದೆ.

ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಗುರುರಾಯರ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ದೇವಸ್ಥಾನದಅರ್ಚಕರಾದ ಹೆಚ್.ವಿ.ಮಂಜುನಾಥಾಚಾರ್ಯ ಮತ್ತು ಬೃಂದಾವನ ಮಿತ್ರಕೂಟದ ಪದಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *