
ಹಿರಿಯೂರು:
ತಾಲ್ಲೂಕಿನ ರಸ್ತೆಗಳ ಸುಧಾರಣೆಯಿಂದ ಉತ್ತಮ ಸಂಪರ್ಕಕ್ಕೆ , ವ್ಯಾಪಾ-ವ್ಯವಹಾರಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶ ಅಭಿವೃದ್ಧಿ ಮತ್ತಷ್ಟು ವೇಗವಾಗಿ ಸಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣಪ್ರದೇಶಗಳ ರಸ್ತೆಗಳನ್ನು ಹಂತ-ಹಂತವಾಗಿ ಡಾಂಬರೀಕರಣ ಮಾಡಲಾಗುವುದು ಎಂಬುದಾಗಿ ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ಆಂಧ್ರಗಡಿ ಭಾಗಕ್ಕೆ ಹೊಂದಿಕೊಂಡಿರುವ ಧರ್ಮಪುರ ಹೋಬಳಿಯ ಹಲಗಲದ್ದಿ, ಖಂಡೇನಹಳ್ಳಿ, ಮದ್ದಿಹಳ್ಳಿ ಗ್ರಾಮದಿಂದ ಧರ್ಮಪುರ ಸಂಪರ್ಕಿಸುವ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಡಿ.ಕೋಟೆ ಸಿ.ತಿಮ್ಮಣ್ಣ ಅವರು ಮಾತನಾಡಿ ಧರ್ಮಪುರ ಭಾಗದ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ.ರಸ್ತೆ ಅಭಿವೃದ್ಧಿಪಡಿಸುವಂತೆ ಮಾಡಿದ್ದ ಮನವಿಗೆ ಸಚಿವರು ಸ್ಪಂದಿಸಿದ್ದಾರೆ. ಎಂದರಲ್ಲದೆ,
ಗ್ರಾಮಸ್ಥರ ಬೇಡಿಕೆ ಈಡೇರಿದ್ದು, ಗ್ರಾಮದ ಜನತೆಯ ಪರವಾಗಿ ಸಚಿವರನ್ನು ಅಭಿನಂದಿಸುತ್ತೇವೆ.ಹಿರಿಯೂರು ಕ್ಷೇತ್ರವನ್ನಾಗಿಸಲು ಸಚಿವರು ಮನಸ್ಸು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರದೇಶದ ಅಧ್ಯಕ್ಷರಾದ ಈರಲಿಂಗೇಗೌಡ, ಖಾದಿರಮೇಶ್, ಕಂದಿಕೆರೆಸುರೇಶಬಾಬು, ಎಸ್.ಆರ್.ತಿಪ್ಪೇಸ್ವಾಮಿ ಶ್ರವಣಗೆರೆ, ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಮ್ಮ, ಮಂಜುಳಾ, ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

