
ಹಿರಿಯೂರು:
ನಗರದ ಶ್ರೀ ತೇರುಮಲ್ಲೇಶ್ವರ ರಸ್ತೆಯ ಟಿ.ಟಿ.ರೋಡ್ ಹಾಗೂ ನೆಹರೂ ವೃತ್ತದಲ್ಲಿರುವ ತಿಂಡಿ-ಗಾಡಿಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಟಿ.ಟಿ. ರೋಡ್ ನಿಂದ ಪ್ರಧಾನ ರಸ್ತೆಗೆ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಈ ತಿಂಡಿ-ಗಾಡಿಗಳಿಂದಾಗಿ ಮುಂದೆ ಬರುವ ವಾಹನಗಳನ್ನು ಗಮನಿಸಲು ಕಷ್ಟವಾಗುತ್ತಿದೆ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ಇದೇ ರೀತಿ ಮುಂದುವರಿದರೆ ಅಪಘಾತವಾಗುವುದಂತೂ ಖಂಡಿತ, ವಾಹನ ಸವಾರರಿಗೆ ಅಕ್ಕಪಕ್ಕದ ಅಂಗಡಿಗಳು ಕಾಣಿಸುವುದೇ ಇಲ್ಲ. ಪೂತಿ೯ಯಾಗಿ ಟಾರ್ಪಲ್ ಗಳನ್ನು ಕಟ್ಟಿರುತ್ತಾರೆ. ದಯಮಾಡಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಈ ತಿಂಡಿಗಾಡಿ ಹಾಗೂ ಕಬ್ಬಿನ ಹಾಲಿನ ಗಾಡಿಗಳನ್ನು ಈ ಸ್ಥಳದಿಂದ ತೆರವುಗೊಳಿಸಿ ಎಂಬುದಾಗಿ ಸಾರ್ವಜನಿಕರು ಈ ಮೂಲಕ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.
