
ಹಿರಿಯೂರು:
ಪ್ರಧಾನಿ ನರೇಂದ್ರಮೋದಿಯವರ ಉತ್ತಮ ಆಡಳಿತಕ್ಕೆ ಬಿಹಾರ ಮತದಾರರು ಮತ್ತೊಮ್ಮೆ ಅಧಿಕಾರ ಕೊಟ್ಟಿದ್ದಾರೆ ತಾಲ್ಲೂಕು ಬಿ.ಜೆ.ಪಿ. ಬಿ.ಜೆ.ಪಿ.ಅಧ್ಯಕ್ಷರಾದ ಕೆ. ಅಭಿನಂದನ್ ಅವರು ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್ ಕಾರ್ಯಕರ್ತರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿ.ಜೆ.ಪಿ. ಮತ್ತು ಸಿ.ಎಂ. ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಬಿಹಾರ ಜನತೆ ಕಾಂಗ್ರೆಸ್ ಒಳಗೊಂಡ ಮಹಾಘಟ್ ಬಂಧನ್ ಒಕ್ಕೂಟವನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಎನ್.ಆರ್.ಲಕ್ಷ್ಮೀಕಾಂತ್, ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷರಾದ ಹನುಮಂತರಾಯಪ್ಪ, ಬಿ.ಜೆ.ಪಿ. ನಿಕಟಪೂರ್ವ ಅಧ್ಯಕ್ಷರಾದ ವಿಶ್ವನಾಥ್, ಮುಖಂಡರುಗಳಾದ ಜೆ.ಬಿ.ರಾಜು, ಎಂ.ಎಸ್.ರಾಘವೇಂದ್ರ, ಹರ್ಷ, ಚಂದ್ರಹಾಸ್, ವೆಂಕಟೇಶ್, ಅಸ್ಗರ್, ತಮ್ಮಣ್ಣ, ಕೆ.ಟಿ.ಹನುಮಂತ, ಪ್ರಜ್ವಲ್, ಜೋಧ, ನಿತಿನ್ ಗೌಡ, ಯೋಗೇಶ್, ಗೋವಿಂದಪ್ಪ, ರಂಗಪ್ಪ, ಪಾರ್ಥ, ರಂಗಸ್ವಾಮಿ, ಮಿಥುನ್, ರಾಕೇಶ್ ಸೇರಿದಂತೆ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
