March 2, 2026
00001

ರೈತರು ನಮಗೆಲ್ಲಅನ್ನನೀಡುವುದರ ಜೊತೆಗೆದೇಶದ

ಖಜಾನೆ ತುಂಬುವ ಮೂಲಕ ರಾಷ್ಟ್ರದ ಆರ್ಥಿಕತೆಯ

ಬೆನ್ನೆಲುಬಾಗಿದ್ದಾರೆ:ಸಂಸದ ಗೋವಿಂದ ಕಾರಜೋಳ

ಹಿರಿಯೂರು:

ಕೃಷಿಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ  2ನೇ ಸ್ಥಾನದಲ್ಲಿದೆ. 2025 ನೇ ಸಾಲಿನ ದೇಶದ ಜಿ.ಡಿ.ಪಿ.ಗೆ (ತಲಾ ರಾಷ್ಟ್ರೀಯ ಉತ್ಪನ್ನ)  ಕೃಷಿ ವಲಯದ ಕೊಡುಗೆ ಶೇ.18ರಷ್ಟಿದೆ. ರೈತರು ನಮಗೆಲ್ಲಾ ಅನ್ನ ನೀಡುವುದರ ಜೊತೆಗೆ ದೇಶದ ಖಜಾನೆ ತುಂಬುವ ಮೂಲಕ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ ಎಂಬುದಾಗಿ ಸಂಸದರಾದ ಗೋವಿಂದ ಎಂ.ಕಾಜೋಳ ಅವರು ಹೇಳಿದರು.

ತಾಲ್ಲೂಕಿನ ಬಬ್ಬೂರುಫಾರಂನಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿದ್ದ 2 ದಿನಗಳ ಕೃಷಿ ಹಾಗೂ ತೋಟಗಾರಿಕೆ ಮೇಳ-2025 ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಲಾಲ್  ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ಘೋಷಣೆ ಫಲ ನೀಡಿದೆ. ಇಂದು ಭಾರತ 350ಮಿಲಿಯನ್ ಮೆಟ್ರಿಕ್ ಟನ್ ಕೃಷಿ ಉತ್ಪಾದನೆಯನ್ನು ಮಾಡುತ್ತಿದೆ. ಆಹಾರ ಉತ್ಪಾದನೆಯಲ್ಲಿ ಪರಾವಲಂಬಿಯಾಗಿದ್ದೇವೆ. ಆದರೂ ರೈತರ ಪರಿಸ್ಥಿತಿ ಇನ್ನೂ ಸುಧಾರಣೆಯಾಗಬೇಕಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಬೇಕಿದೆ   ಎಂಬುದಾಗಿ ಅವರು ಹೇಳಿದರು.

ಹೊಸವಿಚಾರ, ತಂತ್ರಜ್ಞಾನ, ತೋಟಗಾರಿಕೆ , ವಿ್ತರಣೆ, ಜೈವಿಕ ಕೃಷಿ ಉತ್ಪಾದನೆ, ಪುಷ್ಪಕೃಷಿ, ಮೀನುಗಾರಿಕೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ರೈತರಿಗೆ ನೆರವು ನೀಡಿ, ಆರ್ಥಿಕ ಶಕ್ತಿ ತುಂಬುವ ಯೋಜನೆಗಳ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು ನೀಡುವ ಕೆಲಸ ಮಾಡುತ್ತಿದೆ.  ಸುಮಾರು10ಸಾವಿರ ರೈತ ಉತ್ಪಾದಕ ಸಂಘಗಳನ್ನು ಒಗ್ಗೂಡಿಸಿ ಸೊಸೈಟಿಗಳನ್ನು ಸ್ತಾಪಿಸಲಾಗುತ್ತಿದೆ. ಎಂದರಲ್ಲದೆ,

ನಮೋ ಡ್ರೋನ್ ದೀದಿ ಯೋಜನೆಯಡಿ ಮಹಿಳಾ ರೈತ ಸಂಘಗಳಿಗೆ 400ರೂ. ಕೋಟಿ ಮೌಲ್ಯದ ಕೃಷಿ ಡ್ರೋನ್ ಗಳನ್ನು ನೀಡಲಾಗಿದೆ. ಮಣ್ಣು ಪರಿಕ್ಷಾ ಕೇಂದ್ರಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ನೀಡಲಾಗಿದೆ.

ಅಲ್ಲದೆ, “ಪ್ರತಿಹನಿಗೆ ಹೆಚ್ಚುಬೆಳೆ” ಎಂಬ ಉದ್ದೇಶದಿಂದ ನೀರನ್ನು ಮಿತವಾಗಿ ಬಳಕೆ ಮಾಡಲು ಪಿ.ಎಂ.ಕಿಸಾನ್ ಸಿಂಚಾಯಿ ಯೋಜನೆ ಜಾರಿ ಮಾಡಲಾಗಿದೆ. ಕೃಷ ವಿಜ್ಞಾನಿಗಳು ಹಾಗೂ ವಿಶ್ವವಿದ್ಯಾಲಯಗಳು ಸಂಶೋಧನೆಯ ಫಲಿತಾಂಶಗಳನ್ನು ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂಬುದಾಗಿ ಅವರು ಹೇಳಿದರು.

ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1ಲಕ್ಷ 42 ಸಾವಿರದ 767 ರೈತರಿಗೆ ರೂ.713.72ಕೋಟಿ ನೀಡಿದೆ. ಇದೇ ಮಾದರಿಯಲ್ಲಿ ಫಸಲ್ ಭೀಮಾ ಯೋಜನೆಯಡಿ 3ಲಕ್ಷ 43ಸಾವಿರ ರೈತರಿಗೆ 722 ಕೋಟಿ ಪರಿಹಾರ, ಕೃಷಿ ಯಂತ್ರೋಪಕರಣ ಯೋಜನೆಯಡಿ 17ಸಾವಿರದ 306ರೈತರಿಗ ರೂ.47.72 ಕೋಟಿ ರೂ. ವೆಚ್ಚದ ಯಂತ್ರೋಪಕರಣಗಳನ್ನು ನೀಡಲಾಗಿದೆ.

ಪಿ.ಎಂ.ಸಿಂಚಾಯಿ ಯೋಜನೆಯಡಿ 53 ಸಾವಿರದ 301 ರೈತರಿಗೆ 94ಕೋಟಿ ರೂ.ವೆಚ್ಚದಲ್ಲಿ ತುಂತುರು ಹನಿ ನೀರಾವರಿ ಘಟಕಗಳನ್ನು ನೀಡಿದೆ.2500ಕೃಷಿ ಕಾರ್ಮಿಕರಿಗೆ ಹಸುಗಳನ್ನು ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲೆಯ 4.86ಲಕ್ಷ ಜನರಿಗೆ ರೂ.930ಕೋಟಿ ನೀಡಿದೆ.

ಮುದ್ರಾ ಯೋಜನೆಯಡಿ 2ಲಕ್ಷ 65ಸಾವಿರ ಫಲಾನುಭವಿಗಳಿಗೆ ರೂ3891 ಕೋಟಿ ಸಾಲಸೌಲಭ್ಯ ನೀಡಲಾಗಿದೆ. ಉಜ್ವಲ ಯೋಜನೆಯಡಿ 1ಲಕ್ಷ 63ಸಾವಿರ ಕುಟುಂಬಗಳಿಗೆ ಎಲ್.ಬಿ.ಜಿ.ಗ್ಯಾಸ್ ಸಂಪರ್ಕ ನೀಡಲಾಗಿದೆ.

ರಾಜ್ಯದಲ್ಲಿ 66ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದು.ಆದರೆ ರಾಜ್ಯದಲ್ಲಿ ಸದ್ಯ40ಲಕ್ಷ ಹೆಕ್ಟೇರ್ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. ಎಲ್ಲಾ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ನೀರಾವರಿ ಪ್ರದೇಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂಬುದಾಗಿ ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಅವರು ಮಾತನಾಡಿ  ಜಿಲ್ಲೆಯ 1ಸಾವಿರ ಯುವ ರೈತರಿಗೆ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಕೃಷಿ ಅಧ್ಯಯನ ಪ್ರವಾಸ ಏರ್ಪಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜಿಲ್ಲೆಯ ಈರುಳ್ಳಿ ಬೆಳೆಗಾರರು  ಅನುಭವಿಸುತ್ತಿರುವ ನಷ್ಟದ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ.

ಅಲ್ಲದೆ, ಈರುಳ್ಳಿ ಬೆಳೆಯುವ ರೈತರು ಸಹಕಾರ ಸಂಘ ರಚಿಸಿಕೊಂಡು ಕೋಲ್ಡ್ ಸ್ಟೋರೇಜ್  ಘಟಕಗಳನ್ನು ಸ್ಥಾಪಿಸುವ ಪ್ರಯತ್ನಮಾಡಬೇಕು. ಜೈಜವಾನ್, ಜೈಕಿಸಾನ್, ಜೈವಿಜ್ಞಾನ್ ಜೊತೆಗೆ ಜೈ ಸಹಕಾರ ಮಂತ್ರವನ್ನು ಎಲ್ಲರೂ ಪಾಲಿಸಬೇಕು ಎಂಬುದಾಗಿ ಅವರು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಕೈಪಿಡಿ ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರಗತಿಪರ ರೈತರು ಹಾಗೂ ಬಬ್ಬೂರು ಫಾರಂನಲ್ಲಿ ಉತ್ತಮ ಸೇವೆ  ಸಲ್ಲಿಸದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ,  ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಹೆಚ್.ಡಿ. ದೇವಿಕುಮಾರ್, ಹೆಚ್.ಎಸ್.ಶಶಾಂಕ್, ಡಾ.ಶ್ರೀನಿವಾಸ, ನಿರ್ದೇಶಕರುಗಳಾದ ಡಾ.ಬಿ.ಹೇಮ್ಲಾನಾಯ್ಕ್, ಡಾ.ಬಿ.ದುಷ್ಯಂತ ಕುಮಾರ್, ಎಂ.ಡಾ.ಜೆ.ಕೆ.ಗಿರಿಜೇಶ್, ಸಂಶೋಧನಾ ಕೇಂದ್ರದ ನಿರ್ದೇಶಕರಾದ ಶರಣಪ್ಪಜಂಗಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಸವಿತಾ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ಸಿ.ಹೆಚ್.ಕಾಂತರಾಜ, ಜಿಲ್ಲಾ ಪ್ರತಿನಿಧಿ ಕೆ. ಜಗದಿಶ್ ಕಂದಿಕೆರೆ, ಮುಖಂಡರಾದ ಉಮೇಶ್, ತಿಪ್ಪೇಸ್ವಾಮಿ,  ಕೆ.ಎಸ್.ಹೊರಕೇರಪ್ಪ, ಮುರುಳಿ, ಅಭಿನಂದನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *