
ಹಿರಿಯೂರು :
ಜವಾಹರ್ ಲಾಲ್ ನೆಹರುರವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೀತಿ ಆದ್ದರಿಂದ ಪ್ರತಿ ವರ್ಷ ಅವರ ಜನ್ಮದಿನವನ್ನು ಮಕ್ಕಳದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ನೆಹರುರವರು ಈ ದೇಶ ಕಂಡಂತಹ ಅತ್ಯುತ್ತಮ ರಾಜಕಾರಣಿಯಾಗಿದ್ದಾರೆ ಎಂಬುದಾಗಿ ಜಾಮಿಯಾ ಮಸೀದಿ ನಿರ್ದೇಶಕರಾದ ಹೆಚ್.ಆರ್.ಅಬ್ದುಲ್ ಅಜೀಜ್ ಹೇಳಿದರು.

ನಗರದ ಹರಿಶ್ಚಂದ್ರ ಘಾಟ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರುರವರ ಜನುಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಂತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಜ್ಜಿದ್ದಿನ ಮುತ್ತುವಲ್ಲಿಗಳು, ಜಿ.ದಾದಾಪೀರ್, ಅಬ್ದುಲ್ ಲತೀಫ್ ಸಾಬ್, ಬುಡೇನ್ ಸಾಬ್, ಜಾಮಿಯಾ ಮಸೀದಿ ನಿರ್ದೇಶಕರಾದ ಹೆಚ್.ಆರ್.ಅಬ್ದುಲ್ ಅಜೀಜ್, ಕಾಂಗ್ರೆಸ್ ಮುಖಂಡರಾದ ಪಿ.ಎಸ್.ಸಾದತ್ ಉಲ್ಲಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೊಹಮ್ಮದ್ ನಿಜಾಮುದ್ದೀನ್ ಮುಖ್ಯ ಉಪಾಧ್ಯಾಯರಾದ ಅಲ್ತಾಫ್ ಖಾನ್ ಹಾಗೂ ಸಿಬ್ಬಂದಿ ವರ್ಗದವರು ಪೋಷಕರು ಪ್ರೀತಿಯ ಮಕ್ಕಳು ಉಪಸ್ಥಿತರಿದ್ದರು.

