March 6, 2026
00002

ಹಿರಿಯೂರು:

ಕನ್ನಡದ ಅಸ್ಮಿತೆಯನ್ನು ಕತೆಗಳ ಮೂಲಕ ವಿಶ್ವಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಬೂಕರ್ ಪ್ರಶಸ್ತಿ ಪುರಸ್ಕೃತೆಯಾದ ಬಾನುಮುಸ್ತಾಕ್ ಅವರಿಗೆ ಸಲ್ಲುತ್ತದೆ, ಬಾನುಮುಸ್ತಾಕ್ ಅವರ ಕತೆಗಳು ಗಟ್ಟಿತನದಿಂದ ಕೂಡಿದ್ದು, ಮಾನವ ಸಂಬಂಧಗಳನ್ನು ಕುರಿತಂತೆ ಹೆಚ್ಚಾಗಿ ಬರೆದಿದ್ದಾರೆ ಎಂಬುದಾಗಿ  ಸಾಹಿತಿ ಮತ್ತು ಪತ್ರಕರ್ತರಾದ ಪ್ರೊ.ಎಂ.ಜಿ.ರಂಗಸ್ವಾಮಿ ಅವರು ಹೇಳಿದರು.

ನಗರದ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಆವರಣದಲ್ಲಿ  ಜ್ಞಾನ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಶ್ರೀಮತಿ ಪುಟ್ಟರಂಗಮ್ಮ ವೀರಭದ್ರಪ್ಪ ರಂಗಮಂದಿರದಲ್ಲಿ ನೀನಾಸಂ ತಿರುಗಾಟ ಹೆಗ್ಗೋಡು ಇವರುಗಳ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಹೃದಯದ ತೀರ್ಪು’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ರಂಗಭೂಮಿ ಕಲೆಯು ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಈ ರಂಗಕಲೆಯನ್ನು ಬಯಸಿ ಬರುವವರೇ ಕಡಿಮೆಯಾಗುತ್ತಿರುವ ಇಂದಿನ ಆಧುನಿಕ ಜಗತ್ತಿನಲ್ಲಿ, ನೀನಾಸಂ ರಂಗಕಲಾವಿದರನ್ನು ತಯಾರು ಮಾಡುವಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ರಂಗಕಲೆಯನ್ನು ಪೋಷಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ  ಡಾ.ವಿ.ಬಸವರಾಜು ಮಾತನಾಡಿ, ಮನುಷ್ಯನ ಸಹಜ ಗುಣ ಮೈತ್ರಿ ಮತ್ತು ನೈತಿಕತೆ. ಆದರೆ ಕೆಲವು ಸಂದರ್ಭಗಳಲ್ಲಿ ಮನುಷ್ಯರು ಅತಿರೇಕಕ್ಕೆ ಕೊಂಡ್ಯಯುವುದು ಉಂಟು. ನಾಟಕಗಳ ನೋಡುವಿಕೆ ಮತ್ತು ಓದುವಿಕೆಯಿಂದ ನಮಗೆ ರಂಗಜಾಗೃತಿ ಮೂಡುತ್ತದೆ. ಆದ್ದರಿಂದ ರಂಗನಾಟಕಗಳ ನೋಡುವ ಪರಿಪಾಠವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಚಮನ್ ಷರೀಫ್ ಅವರು ಮಾತನಾಡಿ, ಬಾನುಮುಸ್ತಾಕ್ ಅವರು ಕತೆಗಳಲ್ಲಿ ಮಾತ್ರವೇ ಗಟ್ಟಿತನವಿಲ್ಲ. ಬದುಕಿನಲ್ಲೂ ಅವರು ಗಟ್ಟಿಗಿತ್ತಿ ಎಂಬುದು ಅವರು ದಸರಾವನ್ನು ಉದ್ಘಾಟಿಸಿ ಮಾತನಾಡಿದ ಮಾತಿನ ಸಾರಗಳಲ್ಲಿ ಕಾಣಬಹುದಾಗಿದೆ.  ಅವರಲ್ಲಿರುವ ಭಾವೈಕತೆಯ ಭಾವ ಇನ್ನೂ ಎತ್ತರಕ್ಕೆ ಅವರನ್ನು ಬೆಳೆಸಲಿ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲಪ್ಪನಹಳ್ಳಿ ಮಹಾಲಿಂಗಯ್ಯ, ಸ್ವಾಮಿವಿವೇಕಾನಂದ ರಾಜ್ಯಯುವಪ್ರಶಸ್ತಿ ಪುರಸ್ಕೃತರಾದ  ಎಸ್.ಜಿ.ರಂಗಸ್ವಾಮಿಸಕ್ಕರ, ಉಪಸ್ಥಿತರಿದ್ದು ನಾಟಕದ ಕೊನೆಯಲ್ಲಿ ಪ್ರದರ್ಶನವನ್ನು ಕುರಿತಂತೆ ಕವಿ ಶಿವಶಂಕರ ಸೀಗೆಹಟ್ಟಿ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಕವಿ ಜಬಿಯುಲ್ಲಾ ಅಸದ್,  ಮಲ್ಲಿಕಾರ್ಜುನ್, ಸಿದ್ದಲಿಂಗಯ್ಯ, ಮಂಜುನಾಥ,  ಗಡಾರಿಕೃಷ್ಣಪ್ಪ, ಕೆ.ದೊರೇಶ್, ಗಿರೀಶ್. ಅಭಿಷೇಕ್  ಅಲ್ಲದೆ ರಂಗಾಸಕ್ತ ಪ್ರೇಕ್ಷಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *