
ಹಿರಿಯೂರು:
ಸೇತುವೆ ನಿರ್ಮಾಣದಿಂದ ಎರಡೂ ಗ್ರಾಮಗಳ ನಡುವೆ ಸಂಚರಿಸುವ ಜನರಿಗೆ ಸುಗಮ ಸಂಚಾರ, ಕೃಷಿ ಉತ್ಪನ್ನಗಳ ಸಾಗಣೆಗೆ ವೇಗ, ವಿದ್ಯಾರ್ಥಿಗಳು-ಕಾರ್ಮಿಕರು-ರೈತರಿಗೆ ಸುಲಭ ಪ್ರಯಾಣದ ಸೌಲಭ್ಯ ದೊರೆಯಲಿದೆ ಎಂಬುದಾಗಿ ರಾಜ್ಯ ಯೋಜನಾ ಮತ್ತು ಸಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ತಾಲ್ಲೂಕಿನ ಮ್ಯಾದನಹೊಳೆ ಮತ್ತು ಸಮುದ್ರದಹಳ್ಳಿ ಮಧ್ಯೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ನೂತನ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಸಂಪರ್ಕ ಸುಧಾರಣೆಯು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂಬುದಾಗಿ ಅವರು ಹೇಳಿದರು.

