March 2, 2026
06

ಹಿರಿಯೂರು:

ತಾಲ್ಲೂಕಿನ ಪೋಲೀಸ್ ನಿರೀಕ್ಷಕರಾಗಿ ರಾಘವೇಂದ್ರಕಾಂಡಿಕೆ ಅವರು 2022-23 ನೇ ಸಾಲಿನಲ್ಲಿ ಹಿರಿಯೂರಿಗೆ ವರ್ಗಾವಣೆಯಾಗಿ ಬಂದು ಇಲ್ಲಿಗೆ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ ತಮ್ಮ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರನ್ನು ಪಡೆದು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಜನಸಾಮಾನ್ಯರಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ ಎಂಬುದಾಗಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ. ರಾಮಚಂದ್ರ ಅವರು ಹೇಳಿದರು.

ನಗರದ ಎನ್.ಹೆಚ್.4 ಬಳಿ ಇರುವ ಅನಿಲ್ ಕಂಫರ್ಟ್ ನಲ್ಲಿ ಹಿರಿಯೂರು ನಗರ ಪೊಲೀಸ್ ಠಾಣೆ ವತಿಯಿಂದ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ರಾಘವೇಂದ್ರಕಾಂಡಿಕೆ ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನಿಸಿ, ನಂತರ ಅವರು ಮಾತನಾಡಿದರು.

ಸರ್ವ ಜನಾಂಗದ ಶಾಂತಿಯ ತೋಟವಾಗಿ ಪೊಲೀಸ್ ಇಲಾಖೆ ಎಂದರೆ ಭಯವಲ್ಲ ಅದು- ತೆರೆದ ಮನೆ ನೊಂದವರಿಗೆ ರಕ್ಷಣೆ ನೀಡುವ ಆರಕ್ಷಕ ಠಾಣೆ ಎಂಬ ಸಂಕಲ್ಪವನ್ನ  ಸರ್ವರಿಗೂ ಅರ್ಥೈಸಿದ ಕಾಂಡಿಕೆಯವರು ಹಿರಿಯೂರಿನಲ್ಲಿ ಅಲ್ಪ ಅವಧಿಯಲ್ಲಿ ಅಪಾರವಾದ ಸೇವೆ ಸಲ್ಲಿಸಿರುವಂಥದ್ದು ಪ್ರತಿಯೊಬ್ಬರ ಮನೆ-ಮನಗಳಲ್ಲಿ ಸದಾ ಹಸಿರಾಗಿರುತ್ತದೆ ಎಂಬುದಾಗಿ ಹೇಳಿದರು.

ಇದೀಗ ಮಲೆನಾಡ ಸಿರಿಯ ಮಡಿಲಿನ ಅಂಗಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಯೂ ಕೂಡ ತಮ್ಮ ದಕ್ಷತೆಯ ನಿಸ್ವಾರ್ಥತೆಯ ಕಂಪಿನ ಪರಿಮಳವನ್ನು ಬೀರುತ್ತೀರಿ. ಮತ್ತೊಮ್ಮೆ ತಮಗೆ  ಹಿರಿಯೂರು ಜನತೆಯಿಂದ ಧನ್ಯವಾದಗಳು ಎಂಬುದಾಗಿ ಅವರು ಶುಭಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ. ರಾಮಚಂದ್ರ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಆರ್. ಶಿವರಾಜ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಕೆಂಚಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲೇಶ್, ತಾಲೂಕು ಅಧ್ಯಕ್ಷರಾದಕೆ.ಓಂಕಾರಮೂರ್ತಿ, ತಾಲ್ಲೂಕು ಕಾರ್ಯಧ್ಯಕ್ಷರಾದ ರಂಗಸ್ವಾಮಿ, ತಾಲ್ಲೂಕು ಉಪಾಧ್ಯಕ್ಷರಾದ ದಾಸಪ್ಪ, ತಾಲೂಕು ಗೌರವಾಧ್ಯಕ್ಷರಾದ ದೇವರಾಜ್, ತಾಲ್ಲೂಕು ಆಟೋ ಘಟಕದ ಅಧ್ಯಕ್ಷರಾದ ವೈ.ರಮೇಶ್ ತಾಲ್ಲೂಕು ಕಾರ್ಯದರ್ಶಿಯಾದ ಟಿ.ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *