March 2, 2026
05

ಹಿರಿಯೂರು:

ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ನವಂಬರ್ 7 ರಂದು ಸಾಯಂಕಾಲ 6:30ಕ್ಕೆ, ಆದಿವಾಲ ಗ್ರಾಮದ ದೊರೆಸ್ವಾಮಿ ಎನ್ನುವ ಬಡಕೂಲಿ ಕಾರ್ಮಿಕ ಹೃದಯಘಾತದ ಚಿಕಿತ್ಸೆಗೆ ಬಂದಾಗ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ಮೊಬೈಲ್ ಬೆಳಕಿನಲ್ಲಿ ಚಿಕಿತ್ಸೆ ಕೊಡಲು ಪರದಾಡುತ್ತಾರೆ ಎಂಬುದಾಗಿ ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಅವರು ಆರೋಪಿಸಿದರು.

ಹೃದಯಘಾತ ಆದಾಗ ಕೊಡುವ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ಅನ್ನು ಕೊಡದೆ ಇರುವುದರ ಪ್ರಯುಕ್ತ ರೋಗಿಯು ಮರಣ ಹೊಂದಿರುತ್ತಾನೆ. ಆದರೆ, ಪ್ರತಿ ಹೃದಯಘಾತ ಆದ ವ್ಯಕ್ತಿಗೂ ಸಹ ಇಲ್ಲಿಯ ವೈದ್ಯರು ದಾರಿಯಲ್ಲಿಯೇ ಸತ್ತಿದ್ದಾರೆ ಎಂದು ಸರ್ಟಿಫಿಕೇಟ್  ಕೊಟ್ಟುಬಿಡುತ್ತಾರೆ. ನಾವಿದರ ಬಗ್ಗೆ ಕೇಳಿದರೆ ಉಪವಾಸ ಸತ್ಯಾಗ್ರಹ ಮಾಡಿದರೆ ಉಡಾಫೆ ಉತ್ತರಗಳನ್ನು ಕೊಟ್ಟು ಸತ್ಯಗಳನ್ನು ಮರೆಮಾಚುತ್ತಾರೆ ಅವರು ಆರೋಪಿಸಿದರು

ನಿನ್ನೆ ಬೆಳಿಗ್ಗೆ ಆಸ್ಪತ್ರೆಯ ವಾರ್ಡ್ ನ ಸೀಲಿಂಗ್ ಬಿದ್ದು ಮೂವರಿಗೆ ಗಾಯವಾಗಿರುತ್ತದೆ. ಇದೆಲ್ಲರ ಭಾಗವಾಗಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಯನ್ನು ತುರ್ತಾಗಿ ಚಿಕಿತ್ಸೆ ಗೊಳಪಡಿಸಬೇಕೆಂದು ಮನವಿ ಮಾಡುತ್ತೇವೆ ಎಂಬುದಾಗಿ ಅವರು ವ್ಯಂಗ್ಯವಾಡಿದ್ದಾರೆ.

ಈ ರೀತಿ ಬಡವರ ಜೀವಗಳಿಗೆ ಬೆಲೆ ಬೇಡವೇ ಅದೇ ಶ್ರೀಮಂತರಾದರೆ ದೊಡ್ಡ ನಗರದ ಆಸ್ಪತ್ರೆಗಳಿಗೆ ಹೋಗುತ್ತಾರೆ. ಬಡವರಿಗೆ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಮಾದರಿಯ ಆಸ್ಪತ್ರೆಯನ್ನಾಗಿ ಮಾಡುವುದು ಯಾವಾಗ. ಆರೋಗ್ಯ ಇಲಾಖೆಯ ಆಯುಕ್ತರಾದ ಹರ್ಷಗುಪ್ತ ರವರೇ ನೀವು ಪ್ರತಿದಿನ ಏನು ಮಾಡುತ್ತೀದ್ದೀರಾ. ಎಂಬುದಾಗಿ ಪ್ರಶ್ನಿಸಿದರಲ್ಲದೆ,

ರಾಜ್ಯದಲ್ಲಿ ಯಾವ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದೀರಾ, ಚಿಕಿತ್ಸೆ ನಿರಾಕರಿಸುವ ಲಂಚ ಪಡೆಯುವ ನಿರಾಸಕ್ತಿ ನಿರ್ಲಕ್ಷ್ಯ ವಹಿಸುವ ಎಷ್ಟು ವೈದ್ಯರ ಮೇಲೆ ಕ್ರಮ ಕೈಗೊಂಡಿದ್ದೀರಾ, ಅದು ನಮ್ಮ ಕೆಲಸ ಅಲ್ಲಾ ಎಂದು ಎಸಿ ಕಚೇರಿಗಳಲ್ಲಿ ಕುಳಿತು ಬರಿ ಮೀಟಿಂಗ್ ಳನ್ನು ಮಾಡಿದರೆ ಉಪಯೋಗವಿಲ್ಲ.ದಿನೇಶ್ ಗುಂಡೂರಾವ್ ಅವರೇ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಿ ಇಲ್ಲವಾದರೆ ಸಾರ್ವಜನಿಕರೇ ನಿಮಗೆ ಎಚ್ಚೆತ್ತುಕೊಳ್ಳುವ ಹಾಗೆ ಮಾಡುತ್ತಾರೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ಕಸವನಹಳ್ಳಿ ರಮೇಶ್ ಅವರು ಎಚ್ಚರಿಸಿದ್ದಾರೆ.

About The Author

Leave a Reply

Your email address will not be published. Required fields are marked *