
ಹಿರಿಯೂರು:
ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು ಈ ನಾಡು ಕಂಡಂತಹ ಶ್ರೇಷ್ಠ ಸಂತರಾಗಿದ್ದು, ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಜಾತೀಯತೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಮಹಾನ್ ಚೇತನ, ತಮ್ಮ ಪರಿಶುದ್ಧವಾದ ಭಕ್ತಿಯ ಮೂಲಕ ಶ್ರೀಕೃಷ್ಣನನ್ನೇ ಒಲಿಸಿಕೊಂಡಿರುವ ದೇವಮಾನವರು ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಕುರುಬ ಸಮಾಜ, ಕನಕ ನೌಕರರ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಭಕ್ತಿಯ ಮಹಿಮೆಯನ್ನು ಸಾರಿದ ಕನಕದಾಸರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಮುಂದಾದರು, ಇಂದಿನ ಯುವಜನತೆ ಕನಕದಾಸರ ಜೀವನ ಹಾಗೂ ಆದರ್ಶಗಳನ್ನು ತಿಳಿಸಬೇಕಲ್ಲದೆ, ಅವರ ಕೀರ್ತನೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರು ಹಾಗೂ ದಂಡಾಧಿಕಾರಗಳಾದ ಎಂ. ಸಿದ್ದೇಶ್ ರವರು ವಹಿಸಿದ್ದರು. ಶಿಕ್ಷಣ ಪ್ರೇಮಿಗಳು, ಆಧ್ಯಾತ್ಮಿಕ ಚಿಂತಕರು ಹಾಗೂ ಯಾಜ್ಞವಲ್ಕ್ಯ ಶಾಲೆಯ ಸಂಸ್ಥಾಪಕಾಧ್ಯಕ್ಷರಾದ ಸುರೇಶ್ ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ತಾಲ್ಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷರಾದ ವೆಂಕಟೇಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಬಿ.ಮಹಾಂತೇಶ್, ರಾಜ್ಯ ನೇಕಾರ ಮಹಾಮಂಡಲ ಮುಖಂಡ ಎನ್.ಜಯರಾಂ, ಸಮಾಜದ ಮುಖಂಡರಾದ ಪ್ರೇಮದಾಸ್, ಪಿ.ಎಲ್.ಡಿ ಬ್ಯಾಂಕ್ ನಿರ್ಧೇಶಕ ನಂದಿಹಳ್ಳಿ ಗಿರಿಜಣ್ಣ, ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಕೋಡಿಹಳ್ಳಿ, ಅಬ್ಬಿನಹೊಳೆ ಗ್ರಾಮಪಂಚಾಯಿತಿ ಸದಸ್ಯೆ ಶ್ರೀಮತಿ ಪವಿತ್ರಚಿತ್ರಲಿಂಗಪ್ಪ, ಜಿಲ್ಲಾ ಕುರುಬರ ಸಂಘದ ನಿರ್ದೇಶಕರಾದ ಶಿವಕುಮಾರ್ ಬಾಬು, ಇಕ್ಕನೂರು ಗ್ರಾಮಪಂಚಾಯಿತಿ ಸದಸ್ಯ ಸಿದ್ದೇಶ್, ಜಗದೀಶ್ ಬಂಡಾರಿ, ಕಂದಿಕೆರೆಅವಿನಾಶ್, ರಂಗನಾಥಪ್ಪ, ಕನಕ ನೌಕರರ ಸಂಘದ ಅಧ್ಯಕ್ಷರಾದ ಮಂಜಣ್ಣ, ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನಯ್ ಪ್ರಸಾದ್, ವಿಶ್ರಾಂತ ಶಿಕ್ಷಕರಾದ ಹಾಲೇಶ್, ರೇವಣಸಿದ್ದೇಶ್ವರ ಮಠದ ಅಧ್ಯಕ್ಷರಾದ ಕೃಷ್ಣಪ್ಪ, ನಿ|| ಉಪನ್ಯಾಸಕ ನಿಜಲಿಂಗಪ್ಪ, ಸಮಾಜದ ಮುಖಂಡರಾದ ಮುದ್ದುರಾಜು, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ್, ರೇವಣಸಿದ್ದೇಶ್ವರ ಮಠದ ಮಾಜಿ ಅಧ್ಯಕ್ಷರಾದ ತಿಮ್ಮಣ್ಣ, ಖಜಾಂಚಿ ಶಿವಲಿಂಗಮೂರ್ತಿ, ಸೋಮಣ್ಣ, ರಂಗನಾಥ ಪರಮೇನಹಳ್ಳಿ, ಜನಪ್ರಭುತ್ವದ ಎನ್.ಜಿ.ಒ.ಪ್ರತಿನಿಧಿ ಕಾಡಪ್ಪ, ನಾಗೇಂದ್ರಪ್ಪ, ವೀರಹನುಮಪ್ಪ, ಬಗರ್ ಹುಕುಂ ಸಮಿತಿ ನಿರ್ದೇಶಕರಾದ ರಂಗಸ್ವಾಮಿ ಹೂವಿನಹೊಳೆ, ಹೂವಿನಹೊಳೆ ಗ್ರಾಮಪಂಚಾಯಿತಿ ಸದಸ್ಯರಾದ ರಂಗಸ್ವಾಮಿ, ಮಸ್ಕಲ್ ಉಣ್ಣೆ ಸಂಸ್ಥೆ ಅಧ್ಯಕ್ಷರಾದ ಈರಣ್ಣ, ಪಶುಸಂಗೋಪನಾ ಇಲಾಖೆಯ ಸುರೇಶ್, ಕೃಷಿ ಇಲಾಖೆಯ ಸೋಮಶೇಖರ್, ಆರಕ್ಷಕ ವೃತ್ತ ನಿರೀಕ್ಷಕರಾದ ಇ.ಆನಂದ್, ಡಿ.ವೈಎಸ್.ಪಿ.ಶಿವಕುಮಾರ್, ರೇಷ್ಮೇ ಇಲಾಖೆ ಈಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಮೂರ್ತಿ, ಬಿ.ಸಿ.ಎಂ.ಅಧಿಕಾರಿ ಶಿವಕುಮಾರ್, ಸಿ.ಡಿ.ಪಿ.ಒ ರಾಘವೇಂದ್ರ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ತೋಟಗಾರಿಕೆಇಲಾಖೆಯ ಮಂಜುನಾಥ್, ತಿಪ್ಪೇಸ್ವಾಮಿರಾಮಜೋಗಿಹಳ್ಳಿ, ಕಾಂತರಾಜ್ ಹುಲಿ, ಹರ್ತಿಕೋಟೆ ಮಹಾಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ದ್ಯಾಮೇಗೌಡ್ರು ಸೇರಿದಂತೆ ಅನೇಕ ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
