March 2, 2026
00008

ಹಿರಿಯೂರು:

ಸಮಾಜದ ಪ್ರತಿಯೊಂದು ಮಗುವೂ ಕೂಡ ಸೃಜನಶೀಲವ್ಯಕ್ತಿಯಾಗಿದ್ದು, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಶಾಲೆಯ ಶಿಕ್ಷಕರು ಮಾಡಬೇಕು, ಈ ಮೂಲಕ ಮಕ್ಕಳು ತಮ್ಮ ಪ್ರತಿಭೆ ಹೊಂದಿರುವ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಮಾರ್ಗದರ್ಶನವನ್ನು ನೀಡಬೇಕು, ಆಗ ಹೊರಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ಶ್ರೀವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಿರಿಯೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಕಸಬಾ ಹೋಬಳಿ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಾಡು, ನೃತ್ಯ, ಕೌಶಲ್ಯ ಹಾಗೂ ಬರವಣಿಗೆಯ ಕಲೆಯಿದ್ದರೆ ವಿದ್ಯಾರ್ಥಿಗಳು ತಪ್ಪದೇ ಪ್ರದರ್ಶಿಸಬೇಕು ಅದರ ಮೂಲಕ ನೋಡುಗರು ನಿಮ್ಮನ್ನು ಬೆಂಬಲಿದರೆ ನೀವು ಇನ್ನಷ್ಟು ಚೆನ್ನಾಗಿ  ಬೆಳಸಿಕೊಳ್ಳಲು ಅವಕಾಶ ಕೊಟ್ಟಂತಾಗುತ್ತದೆ, ಇಂದು ಮಹಿಳೆಯರುಪುರುಷರಷ್ಟೇ ಬಲಿಷ್ಠರು ಎಂಬುದನ್ನು ಮಹಿಳೆಯರು ಕ್ರಿಕೆಟ್ ವಿಶ್ವಕಪ್ ನಲ್ಲಿ ಚಾಂಪಿಯನ್ ಶಿಪ್ ಗಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದರಲ್ಲದೆ,

ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರುವಲ್ಲಿ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು, ಇಂತಹ ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮ  ಪ್ರದರ್ಶನ ನೀಡಬೇಕು. ಪ್ರಶಸ್ತಿಯ ಕಡೆಗೆ  ಹೆಚ್ಚು ಗಮನ ಕೊಡದೆ ಇನ್ನೂ ಹೆಚ್ಚಿನ ಪ್ರಯತ್ನದ ಮೂಲಕ ಯಶಸ್ಸು  ಪಡೆದುಕೊಳ್ಳಬೇಕು  ಎಂಬುದಾಗಿ ಅವರು  ಹೇಳಿದರು.

ವಾಗ್ದೇವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಕೆ.ವಿ.ಅಂಬರೀಶ್ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಅನಾವರಣೆಗೊಳಿಸಲು ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಿದೆ ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಯಶಸ್ಸನ್ನು ಸಾಧಿಸಬೇಕು ಎಂಬುದಾಗಿ ಅವರು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಇ.ಸಿ.ಒ.ಜಾಫರ್ ಸಾಧಿಕ್, ಪ್ರೌಢಶಾಲಾ ತಾಲ್ಲೂಕು ಅಧ್ಯಕ್ಷರಾದ ಲೋಹಿತ್, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ವಾಗ್ದೇವಿ ಶಾಲೆಯ ಶಿಕ್ಷಕ ಶಿವಪ್ರಸಾದ್ ಹಾಗೂ ಶಿಕ್ಷಕಿ ಭಾಗ್ಯಮ್ಮ , ವಿವಿಧ ಶಾಲೆಗಳ ಶಿಕ್ಷಕ-ಶಿಕ್ಷಕಿಯರು, ಪ್ರತಿಭಾಕಾರಂಜಿಯಲ್ಲಿ ಪಾಲ್ಗೊಂಡ ಮಕ್ಕಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *