
ಹಿರಿಯೂರು:
ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಸಾಹಿತ್ಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡನಾಡಿನಲ್ಲಿ ಕನ್ನಡಿಗರಾದ ನಾವುಗಳು ನಾಡಿನ ಶ್ರೀಮಂತ ಭಾಷೆಯಾದ ಕನ್ನಡವನ್ನು ಉಳಿಸಿ, ಬೆಳೆಸಿ, ಪೋಷಿಸುವ ಕೆಲಸವನ್ನು ಮಾಡಬೇಕಾಗಿದೆ ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರು ರಾಮಕೃಷ್ಣ ಹೇಳಿದರು.
ನಗರದ ವೇದಾವತಿ ನಗರದ ಕರವೇ ಶಾಶ್ವತ ಧ್ವಜಸ್ತಂಭದ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ಕನ್ನಡನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದರೂ, ಹೃದಯವಂತ ಕನ್ನಡಿಗರು ಇಲ್ಲಿ ನೆಲೆಸಿರುವ ಬೇರೆ ಬೇರೆ ರಾಜ್ಯಗಳ ಎಲ್ಲಾ ಭಾಷೆಯ ಜನರೊಂದಿಗೆ ಹೊಂದಿಕೊಂಡು ಸಹಬಾಳ್ವೆ ನಡೆಸುವ ಮೂಲಕ ಈ ಕನ್ನಡ ನಾಡನ್ನು ಕವಿಗಳು ಹೇಳಿರುವ ಹಾಗೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿ, ಕನ್ನಡದ ಹಿರಿಮೆಯನ್ನು ವಿಶ್ವದೆಲ್ಲಡೆ ಹರಡುವಂತೆ ಮಾಡಿದ್ದಾರೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಗೌರವಾಧ್ಯಕ್ಷರಾದ ಗೋ.ಬಸವರಾಜ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್. ದಾದಾಪೀರ್, ನಗರಾಧ್ಯಕ್ಷರಾದ ಮೊಹಮ್ಮದ್ ಜಾಕೀರ್, ಎಂ.ಕೆ.ಜಾಫರ್, ಎಲ್.ಎನ್.ಸ್ವಾಮಿ, ಗಿರೀಶ್, ಸುಹೇಲ್, ನೂರುಲ್ಲಾ, ರಾಜಣ್ಣಗೌಡ್ರು, ಆಫ್ರೀದ್, ಶ್ರೀಧರ್, ವೀರೇಶ್ , ಶಿವಕುಮಾರ್, ಆಸೀಫ್, ರಫೀಕ್, ಅಶ್ಮತ್, ದಾದಾಪೀರ್, ಸುಹೇಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

