March 5, 2026
03

ಸುಮಾರು 9.92 ಲಕ್ಷ ರೂ ಮೌಲ್ಯದ ಕುರಿಗಳನ್ನು ಕಳ್ಳತನ ಮಾಡಿದ್ದ

ಆರೋಪಿಯನ್ನು 24 ಗಂಟೆ ಒಳಗೆ ಬಂಧಿಸಿ, ಕುರಿಗಳನ್ನು ವಶಪಡಿಸಿ

ಕೊಂಡ ಘಟನೆ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಿರಿಯೂರು :

ಸುಮಾರು 9.92 ಲಕ್ಷ ರೂ ಮೌಲ್ಯದ ಕುರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು 24 ಗಂಟೆ ಒಳಗೆ ಬಂಧಿಸಿ ಆತನಿಂದ ಕುರಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಅಬ್ಬಿನ ಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿರಾ ತಾಲೂಕಿನ ದ್ವಾರನ ಕುಂಟೆ ಗ್ರಾಮದ ಲಕ್ಷ್ಮಿಕಾಂತ್ ಬಂಧಿತ ಆರೋಪಿ, ಹಿರಿಯೂರು ತಾಲೂಕಿನ ಸಕ್ಕರೆ ಗ್ರಾಮದ ಕುರಿಗಾಯಿ ಭೂತಣ್ಣ ಅವರು ಗುಂಡಪ್ಪ ಅವರ ಜಮೀನಿನಲ್ಲಿ 120 ಕುರಿಗಳನ್ನು ಬಿಟ್ಟಿದ್ದರು.

ಹಟ್ಟಿಯಲ್ಲಿದ್ದ ಕುರಿಗಳನ್ನು ಕಳ್ಳರು ನವಂಬರ್ 1 ರ ರಾತ್ರಿ ಕಳ್ಳತನ ಮಾಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆ ಒಳಗಾಗಿ ಕಳ್ಳರನ್ನು ಬಂಧಿಸಿದ್ದಾರೆ ನೊಂದಿದ್ದ ಬಡ ರೈತನಿಗೆ ಕುರಿಗಳನ್ನು ಹುಡುಕಿ ಕೊಟ್ಟಿದ್ದಾರೆ.

About The Author

Leave a Reply

Your email address will not be published. Required fields are marked *