March 2, 2026
0000000000001

ಹಿರಿಯೂರು:

ನಮ್ಮ ನಾಯಕರು ಹಾಗೂ ಜನಪ್ರಿಯ ಶಾಸಕರಾದ ಬಿ.ವೈ.ವಿಜಯೇಂದ್ರಯಡಿಯೂರಪ್ಪರವರ ಜನ್ಮದಿನವನ್ನು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಪುಸ್ತಕ, ಪೆನ್ನು ಹಾಗೂ ಬ್ಯಾಗ್ ವಿತರಿಸುವ ಮೂಲಕ ಆಚರಿಸುತ್ತಿರುವುದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂಬುದಾಗಿ ತಾಲ್ಲೂಕು ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ಅಭಿನಂದನ್ ಅವರು ಹೇಳಿದರು.

ತಾಲ್ಲೂಕಿನ ಶೇಷಪ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೀವದಾತೆ ಫೌಂಡೇಶನ್ ಹಾಗೂ ಬಿ.ಜೆ.ಪಿ. ಹಿರಿಯೂರು ಮಂಡಲದ ವತಿಯಿಂದ ನಮ್ಮ ಬಿ.ಜೆ.ಪಿ. ರಾಜ್ಯಾಧ್ಯಕ್ಷರು ಹಾಗೂ ಜನಪ್ರಿಯ ಶಾಸಕರಾದ ಬಿ.ವೈ.ವಿಜಯೇಂದ್ರಯಡಿಯೂರಪ್ಪರವರ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ಅಭಿನಂದನ್ ರವರ ಅಧ್ಯಕ್ಷತೆಯಲ್ಲಿ ಉಚಿತವಾಗಿ ಬ್ಯಾಗ್ ಪೆನ್ ಹಾಗೂ ಪುಸ್ತಕಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ.ಯ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಮುರುಳಿ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ವಿಶ್ವನಾಥ್, ಬಿ.ಜೆ.ಪಿ. ಜಿಲ್ಲಾ ಮುಖಂಡರಾದ ಜೆ.ಬಿ.ರಾಜು, ಮುಖಂಡರುಗಳಾದ ಬಸವರಾಜ್ ನಾಯಕ, ಮಂಜುನಾಥ್, ಕೆ.ಟಿ.ಹನುಮಂತ, ನಿತಿನ್ ಗೌಡ, ಮಾರುತಿ, ಮಾರಣ್ಣ, ಗೋವಿಂದಪ್ಪ, ಶಿವಣ್ಣ, ದರ್ಶನ, ಶ್ರೀಕೃಷ್ಣ, ಶ್ರೀಮತಿ ರತ್ನಮ್ಮ, ಶ್ರೀಮತಿ ಸಿದ್ದಮ್ಮ, ಶ್ರೀಮತಿದ್ರಾಕ್ಷಯಣಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಎಸ್. ಡಿ.ಎಂ.ಸಿ. ಸದಸ್ಯರು, ಕಾರ್ಯಕರ್ತರು, ಜೀವದಾತೆ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

See insights

Create ad

All reactions:

3Mani Gowda, Lokesh Palegar and 1 other

About The Author

Leave a Reply

Your email address will not be published. Required fields are marked *