
ಹಿರಿಯೂರು:
ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಶ್ರೀ ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ವಾಸವಿ ವಿದ್ಯಾವರ್ಧಕ ಸಂಘ, ರೋಟರಿ ಹಿರಿಯೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಹಿರಿಯೂರು ಮತ್ತು ಲಕ್ಷ್ಮೀ ಸರ್ಜಿಕಲ್ ಟ್ರಾಮಾ ಆರ್ಥೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಡಾ|| ಮುದ್ರಿಆಸ್ಪತ್ರೆ ರಾಣೇಬೆನ್ನೂರು ಹಾಗೂ ಶ್ರೀಲಕ್ಷ್ಮೀ ಆರೋಗ್ಯ ಮತ್ತು ಶಿಕ್ಷಣ ಸಮಗ್ರ ಅಭಿವೃದ್ಧಿ ಸೇವಾಸಂಸ್ಥೆ, ರಾಣೆಬೆನ್ನೂರು ಇವರ ಸಂಯುಕ್ತಾಶ್ರಯದಲ್ಲಿ ನವಂಬರ್ 8ರ ಶನಿವಾರದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಮೊಣಕಾಲು ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ಆಪರೇಶನ್ ಗಳಿಗಾಗಿ ವಿಶೇಷ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೋಗದ ತೀವ್ರತೆ ಹಾಗೂ ಯಶಸ್ವಿನಿ ಕಾರ್ಡ್ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ವಿ.ಅಮರೇಶ್ 9845565179, ತಾಲ್ಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಜಿಲ್ಲಾ ಸಂಯೋಜಕರಾದ ಶಶಿಕುಮಾರ್, ರೋಟರಿ ಅಧ್ಯಕ್ಷರಾದ ಕೆ.ಎ.ವರುಣ, ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್, ರೆಡ್ ಕ್ರಾಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರ್ ರಾಜ್, ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ, ಡಾ.ಸಂಜೀವಮುದ್ರಿ 9242215990, ವೀರೇಶ್ 9986398004 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
