
ಹಿರಿಯೂರು:
ನಗರದ ದಾನಿಗಳಾದ ಶ್ರೀ ಗಣೇಶ್ ರವರು ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮದಲ್ಲಿ ಪ್ರತಿ ತಿಂಗಳಲ್ಲಿ ಮೊದಲನೇ ಬುಧವಾರದಂದು ಮಧ್ಯಾಹ್ನದ ಹೋಳಿಗೆ ಊಟವನ್ನು ಆಶ್ರಮದ ಎಲ್ಲಾ ಹಿರಿಯರಿಗೆ ವ್ಯವಸ್ಥೆ ಮಾಡಿದ್ದಾರೆ ಎಂಬುದಾಗಿ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶ್ರೀಯುತ ಗಣೇಶ್ ರವರ ಸೇವಾಮನೋಭಾವಕ್ಕೆ ಶ್ರೀಶುಭೋದಯ ವೃದ್ಧಾಶ್ರಮ ಸಮಿತಿ ವತಿಯಿಂದ ಶ್ರೀಯುತ ಗಣೇಶ್ ರವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಆಶ್ರಮದ ಎಲ್ಲಾ ನಿವಾಸಿಗಳು ಹಾಗೂ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿಯವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
