
ಹಿರಿಯೂರು :
ತಾಲ್ಲೂಕಿನ ದೊಡ್ಡಕಟ್ಟೆ ಗ್ರಾಮದ ಶ್ರೀ ರಾಜಮಾಣಿಕ್ಯಾಮ್ ಇವರು ಇಂಡಿಯನ್ ಏರ್ ಫೋರ್ಸ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಹೊಂದಿ ದೊಡ್ಡಕಟ್ಟೆ ಗ್ರಾಮದಲ್ಲಿ ನೆಲೆಸಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ, ಅವರ ನಿಧನದ ಸುದ್ದಿ ತಿಳಿದ ತಕ್ಷಣ ಗ್ರಾಮದ ಬಂಧುಗಳು ಸೇರಿದಂತೆ ಅನೇಕರು ಅವರ ಮನೆಗೆ ಧಾವಿಸಿ, ಸಂತಾಪ ಸೂಚಿಸಿ, ಮೃತರ ಅಂತಿಮ ದರ್ಶನ ಪಡೆದರು.

ಅವರ ನಿಧನದ ಸುದ್ದಿ ತಿಳಿದ ತಕ್ಷಣ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಕೆ.ಅಭಿನಂದನ್ ರವರು ಮೃತರ ಮನೆಗೆ ಭೇಟಿ ನೀಡಿ, ಮೃತರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಮೂಲಕ ಶ್ರೀ ರಾಜಮಾಣಿಕ್ಯಾಮ್ ರವರ ನಿಧನವು ನಮಗೆ ಅತ್ಯಂತ ನೋವನ್ನುಂಟುಮಾಡಿದೆ ಎಂದರಲ್ಲದೆ, ಅವರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ ಎಂಬುದಾಗಿ ಸಂತಾಪ ಸೂಚಿಸಿದರು.


