
ಹಿರಿಯೂರು:
ನಗರದ ಸಿ.ಎಂ.ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಸಡಗರ-ಸಂಭ್ರಮದಿಂದ ಹಲವಾರು ಭಕ್ತ ಸಮೂಹದ ನಡುವೆ ಭಕ್ತಿಪೂರ್ವಕವಾಗಿ ನೆರವೇರಿತು.
ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತಸ್ವಾಮೀಜಿ ಹಾಗೂ ಶ್ರೀ ಕೃಷ್ಣಯಾದವಾನಂದಸ್ವಾಮೀಜಿಯವರು ವಿಮಾನ ಗೋಪುರದ ಕಲಶ ಪ್ರತಿಷ್ಠಾಪನೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಜಯರಾಮಯ್ಯ ಕೂಡ ದೇವಾಲಯಕ್ಕೆ ಆಗಮಿಸಿದ್ದರು. ಕೃಷ್ಣಕುಮಾರಿ, ಸಂಗೀತ ವಿದ್ವಾನ್ ತ್ರಿವೇಣಿ ಮತ್ತು ಸಂಗಡಿಗರಿಂದ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಕಾರ್ಯಕಾರಿ ಮಂಡಳಿ ಗೌರವಾಧ್ಯಕ್ಷರಾದ ಡಿ.ನಾರಾಯಣರೆಡ್ಡಿ, ಅಧ್ಯಕ್ಷರಾದ ಬಸಂತ್ ಕುಮಾರ್, ಉಪಾಧ್ಯಕ್ಷರಾದ ನಿರಂಜನಮೂರ್ತಿ, ಪಿ.ಕೆ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಿರಂಜನಶೀಲವಂತರ್, ಸಂಘಟನಾ ಕಾರ್ಯದರ್ಶಿ ಪಿ.ಹೆಚ್.ನಾಗರಾಜಪ್ಪ, ಸದಸ್ಯರಾದ ಮಹಾಂತೇಶ್, ಸಿಂಗಾರಿ, ಟಿ.ಎಸ. ಶಿವಪ್ರಸಾದ್, ಶ್ರೀಧರ, ಎಂ.ಜಿ.ಓಂಕೇಶ್, ತುಳಸಿ ಶಿವಣ್ಣ, ವೆಂಕಟೇಶರೆಡ್ಡಿ, ರಾಘವೇಂದ್ರ, ಕಾರ್ತಿಕ್, ಅಂಬಿಕಾ, ಓಂಕಾರೇಶವರ್, ರಮೇಶ್, ಲಲಿತಮಲ್ಲೇಶ್, ರವಿಚಂದ್ರಗೌಡ, ಕೃಷ್ಣಕಣ್ಣಯ್ಯ ಹಾಗೂ ನೂರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.

