March 2, 2026
00002

ಹಿರಿಯೂರು:

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ   ಹಿರಿಯೂರು ವಿಧಾನಸಭಾ ಕ್ಷೇತ್ರದ  ಶಾಸಕರಾದ ಡಿ.ಸುಧಾಕರ್ ಅವರು ಪ್ರತಿನಿಧಿಸುವ ಹಿರಿಯೂರು ವಿಧಾನಸಭಾ ಕ್ಷೇತ್ರದ   ಪಾಲವ್ವನಹಳ್ಳಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ  ಚುನಾವಣೆಯಲ್ಲಿ  ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಪಕ್ಷಗಳ ಎನ್.ಡಿ.ಎ. ಮೈತ್ರಿ ಕೂಟಕ್ಕೆ ಭರ್ಜರಿ ಜಯ ದೊರೆತಿದೆ.

ಪಾಲವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೋವೇರಹಟ್ಟಿ ರವಿವರ್ಮ ಹಾಗೂ ಉಪಾಧ್ಯಕ್ಷರಾಗಿ ಪಾಲವ್ವನಹಳ್ಳಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಿಗೆ ದಿನೇಶ್ ಸೂಚಕರಾಗಿ, ಕೆ.ದ್ಯಾಮೇಗೌಡ ಅನುಮೋದಕರಾಗಿದ್ದರು. ಉಪಾಧ್ಯಕ್ಷರಿಗೆ ರವೀಂದ್ರಸೂಚಕ, ಭಾಗ್ಯಮ್ಮ ಗೋವಿಂದಪ್ಪ ಅನುಮೋದಕರಾಗಿದ್ದರು.ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ  ಸೋಮಶೇಖರ್ ಆಗಮಿಸಿ ಚುನಾವಣೆ ನಡೆಸಿಕೊಟ್ಟರು. ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ 12ಕ್ಕೆ 12ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಲಾಗಿತ್ತು..ದ್ಯಾಮೇಗೌಡರ ನೇತೃತ್ವದ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಬೆಂಬಲಿತ 8 ಮಂದಿ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಬೆಂಬಲಿತ 4ನಿರ್ದೇಶಕರು ಆಯ್ಕೆಯಾಗಿದ್ದಾರೆ. ಆದರೆ ಹೊಸ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಲಿತ ನಿರ್ದೇಶಕ ಪಾಲವ್ವನಹಳ್ಳಿ ಚಿದಾನಂದ್ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಲು ಮುಂದಾಗಿದ್ದರು.

ಆದರೆ ಅವರಿಗೆ ಸೂಚಕರು, ಅನುಮೋದಕರು ಲಭ್ಯವಿಲ್ಲದೆ, ಅರ್ಜಿ ಹಾಕಲಿಲ್ಲ. ಇತರ  3ಮಂದಿ ಕಾಂಗ್ರೆಸ್ ಪಕ್ಷದ ಬೆಂಲಿತ  ನಿರ್ದೇಶಕರಾದ  ಬಾಷಾಸಾಬ್, ರವೀಂದ್ರಪ್ಪ, ರಾಜಣ್ಣ ಇವರು ಕೊನೆ ಕ್ಷಣದಲ್ಲಿ ಬಿ.ಜೆ.ಪಿ.- ಜೆ.ಡಿ.ಎಸ್. ಕ್ಷೇತ್ರಕ್ಕೆ ಬೆಂಲಿಸಿದರು.  ಈ ಚುನಾವಣೆ ಕಾಂಗ್ರೆಸ್, ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಪಕ್ಷಗಳ ಮುಖಂಡರಿಗೆ ಪ್ರತಿಷ್ಠೆಯಾಗಿತ್ತು.

ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ ನಡೆದ ಬಿ.ಜೆ.ಪಿ.- ಜೆ.ಡಿ.ಎಸ್. ಬೆಂಬಲಿತ ನಿರ್ದೇಶಕರುಗಳಾದ ಕೋವೇರಹಟ್ಟಿ ದ್ಯಾಮೇಗೌಡ, ರವಿವರ್ಮ, ಪಾಲವ್ವನಹಳ್ಳಿಯ ಬಿ.ಆರ್.ರಾಮಚಂದ್ರಪ್ಪ, ದಿನೇಶ್, ಮಂಜಕ್ಕ, ಲತಾ, ಭಾಗ್ಯಮ್ಮ, ಗೋವಿಂದಪ್ಪ ಹಾಗೂ ಕಾರೋಬನಹಳ್ಳಿ ರತ್ನಮ್ಮ,  ಇವರುಗಳು ಅವಿರೋಧವಾಗಿ  ಆಯ್ಕೆಯಾಗಿದ್ದರು.

About The Author

Leave a Reply

Your email address will not be published. Required fields are marked *