March 6, 2026
00002

ಹಿರಿಯೂರು:   

ಶ್ರೀಶುಭೋದಯ ಶೈಕ್ಷಣಿಕ ಸೇವಾ ಆಶ್ರಮದ ಹಿತೈಷಿಗಳೂ ದಾನಿಗಳು ಆದ ರಾಜಲಕ್ಷ್ಮಿ ಎಲೆಕ್ಟ್ರಿಕಲ್ಸ್ ನ ಮಾಲೀಕರಾದ ಶ್ರೀಯುತ ಶ್ರವಣ್ ಸಿಂಗ್ ರಾಜ್ ಪುರೋಹಿತ್ ರವರ ಪ್ರೀತಿಯ ಮಗನಾದ ಅಶೋಕ್ ಸಿಂಗ್ ರಾಜ್ ಪುರೋಹಿತ್ ರವರ  ಹುಟ್ಟುಹಬ್ಬದ ಅಂಗವಾಗಿ ಆಶ್ರಮದ ಹಿರಿಯರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿಸಿದ್ದಾರೆ ,ಇವರಿಗೆ ನಮ್ಮ ಆಶ್ರಮದ ಪರವಾಗಿ ತುಂಬುಹೃದಯದ ಧನ್ಯವಾದಗಳು ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.

ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮದಲ್ಲಿ ರಾಜಲಕ್ಷ್ಮಿ ಎಲೆಕ್ಟ್ರಿಕಲ್ಸ್ ನ ಮಾಲೀಕರಾದ ಶ್ರೀಯುತ ಶ್ರವಣ್ ಸಿಂಗ್ ರಾಜ್ ಪುರೋಹಿತ್ ರವರ ಪ್ರೀತಿಯ ಮಗನಾದ ಅಶೋಕ್ ಸಿಂಗ್ ರಾಜ್ ಪುರೋಹಿತ್ ರವರ  ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀ ಶುಭೋದಯ ಸೇವಾ ವೃದ್ಧಾಶ್ರಮದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಶ್ರೀಆಶ್ರಮದ ಹೊಸ ಕೊಠಡಿಗಳಿಗೆ ನಿರ್ಮಾಣಕ್ಕಾಗಿ ಕಬ್ಬಿಣವನ್ನು ಕೊಡಿಸುವುದಾಗಿ ತಿಳಿಸಿದ್ದು,  ಶ್ರೀಯುತರ ಸೇವಾಮನೋಭಾವಕ್ಕೆ ಆಶ್ರಮ ಸಮಿತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಅವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಲ್ಲೇಣು ಗ್ರಾಮದ ನಾಗೇಶ್, ತಿಪ್ಪೇಶ್ ಹಾಗೂ ರಾಜಲಕ್ಷ್ಮಿ ಎಲೆಕ್ಟ್ರಿಕಲ್ಸ್ ನ ಮಾಲೀಕರಾದ ಶ್ರೀಯುತ ಶ್ರವಣ್ ಸಿಂಗ್ ರಾಜ್ ಪುರೋಹಿತ್ ರವರ ಕುಟುಂಬಸ್ಥರು ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *